Breaking News

ಕುಮಾರಸ್ವಾಮಿಗೆ ಕರಿಯ ಎಂದ ಜಮೀರ್ ವಿರುದ್ಧ ಜೆಡಿಎಸ್ ದೂರು

Spread the love

ಬೆಂಗಳೂರು: ಮಾರ್ಚ್‌ 30ರಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಬಣ್ಣದ ಕುರಿತು ‘ಕಾಲಾ ಕುಮಾರಸ್ವಾಮಿ’ ಎಂಬ ಪದ ಬಳಕೆ ಮಾಡಿರುವ ಕಾಂಗ್ರೆಸ್‌ ಶಾಸಕ ಬಿ.ಜೆಡ್‌. ಜಮೀರ್‌ ಅಹಮ್ಮದ್ ಖಾನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಯುವ ಘಟಕ ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದೆ.

ಬೆಂಗಳೂರು ಮಹಾನಗರ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಎ.ಎಂ. ಪ್ರವೀಣ್‌ ಕುಮಾರ್‌ ನೇತೃತ್ವದ ನಿಯೋಗ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರನ್ನು ಸೋಮವಾರ ಭೇಟಿಮಾಡಿ ದೂರು ಸಲ್ಲಿಸಿತು. ಜಮೀರ್‌ ಅಹಮ್ಮದ್ ಅವರು ಮಾ.30ರಂದು ಮಾಡಿರುವ ಭಾಷಣದ ದೃಶ್ಯಾವಳಿ ಇರುವ ಸಿ.ಡಿಯನ್ನೂ ದೂರಿನೊಂದಿಗೆ ನೀಡಿತು.

‘ಕಾಲಾ ಕುಮಾರಸ್ವಾಮಿ ಎನ್ನುವ ಮೂಲಕ ಜಮೀರ್‌ ಅಹಮ್ಮದ್ ಅವರು ಕುಮಾರಸ್ವಾಮಿ ಅವರ ಮೈಬಣ್ಣದ ಕುರಿತು ಕೀಳಾಗಿ ಮಾತನಾಡಿದ್ದಾರೆ. ಅವರ ಹೇಳಿಕೆ ಜನಾಂಗೀಯ ನಿಂದನೆ ವ್ಯಾಪ್ತಿಗೆ ಬರುತ್ತದೆ. ಜಮೀರ್‌ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ