Breaking News

ಗಂಡ ಹೆಂಡತಿ ಜೊತೆಗೆ ಹೋಗಬಹುದಂತೆ, ಥಿಯೇಟರ್ ನಲ್ಲಿ ಬೇರೆ ಬೇರೆ ಕೂತ್ಕೋಬೇಕಂತೆ

Spread the love

ಬೆಂಗಳೂರು, ಏಪ್ರಿಲ್ 4: ಕೊರೊನಾ ಪಾಸಿಟೀವ್ ಕೇಸುಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾತನಾಡುತ್ತಿದ್ದ ಡಿಕೆಶಿ, “ಸರಕಾರದ ಹೊಸ ಮಾರ್ಗಸೂಚಿ ಅಟ್ಟರ್ ಫ್ಲಾಪ್ ಆಗಲಿದೆ. ಪ್ರಾಕ್ಟಿಕಲ್ ಬುದ್ದಿ ಅನ್ನೋದು ಸರಕಾರಕ್ಕೆ ಇಲ್ಲ. ಯಾರನ್ನು ನಿಯಂತ್ರಣ ಮಾಡಬೇಕೋ ಅಲ್ಲಿ ಮಾಡಬೇಕು”ಎಂದು ಅಭಿಪ್ರಾಯ ಪಟ್ಟರು.

“ಪ್ರಯಾಣಿಕರು ನಿಂತುಕೊಂಡು ಹೋಗಬಾರದು ಎನ್ನುವ ಕಾನೂನು ತಂದಿದ್ದಾರೆ. ಅಕ್ಕಪಕ್ಕ ಕೂತರೆ ಕೊರೊನಾ ಬರುವುದಿಲ್ಲವೇ? ಗಂಡ ಹೆಂಡತಿ ಥಿಯೇಟರ್ ನಲ್ಲಿ ಬೇರೆ ಬೇರೆ ಕುಳಿತುಕೊಳ್ಳಬೇಕಂತೆ, ಮನೆಯಲ್ಲಿ ಜೊತೆಗೆ ಇರಬಹುದಂತೆ”ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.

“ಮನೆಯಲ್ಲಿ ಜೊತೆಗೆ ಮಲಗುತ್ತೇವೆ. ಸ್ನೇಹಿತರ ಜೊತೆಗೆ ಇರುತ್ತೇವೆ. ಸಿನಿಮಾ ಮಂದಿರದಲ್ಲಿ ಒಂದು ಸೀಟು ಬಿಟ್ಟು ಕುಳಿತುಕೊಳ್ಳಬೇಕು ಎನ್ನುವ ಕಾನೂನು ಮಾಡುತ್ತಾರಲ್ವಾ, ಈ ಸರಕಾರಕ್ಕೆ ಏನು ಹೇಳೋಣ”ಎಂದು ಡಿಕೆಶಿ ಆಕ್ರೋಶ ವ್ಯಕ್ತ ಪಡಿಸಿದರು.

“ಮದುವೆ ಮುಂತಾದ ಸಮಾರಂಭಗಳಿಗೆ ನಿಯಂತ್ರಣ ಹೇರುವುದು, ಪ್ರಾಕ್ಟಿಕಲ್ ಆಗಿ ಇದು ಸಾಧ್ಯವಿಲ್ಲ. ಕಾನೂನು ಎನ್ನುವುದು ಎಲ್ಲರಿಗೂ ಒಂದೇ ಇರಬೇಕು, ಒಬ್ಬರಿಗೆ ಒಂದೊಂದು ಇರಬಾರದು”ಎಂದು ಡಿಕೆಶಿ ಹೇಳಿದರು.


Spread the love

About Laxminews 24x7

Check Also

ಬೀಡಾಡಿ ದನವನ್ನು ಕಾರಿಗೆ ತುಂಬಿಕೊಂಡು ಪರಾರಿ: ಪ್ರಮುಖ ಆರೋಪಿ ಬಂಧನ

Spread the loveಉಡುಪಿ: ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು  ಹಿಂಸಾತ್ಮಕವಾಗಿ ಎಳೆದುಕೊಂಡು ಹೋಗಿ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ