Breaking News

ಸಿಡಿ ಪ್ರಕರಣ; ಯುವತಿ ಪರ ವಕೀಲರು ಹೇಳುವುದೇನು?

Spread the love

ಬೆಂಗಳೂರು, ಮಾರ್ಚ್ 26; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತಿರುವನ್ನು ಪಡೆದುಕೊಳ್ಳುತ್ತಿದೆ. ಸಂತ್ರಸ್ತ ಯುವತಿ 3ನೇ ವಿಡಿಯೋವನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾಳೆ. ಮಾಜಿ ಸಚಿವರ ವಿರುದ್ಧ ವಕೀಲರ ಮೂಲಕ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ.

ಶುಕ್ರವಾರ ಯುವತಿ ವಿಡಿಯೋ ಬಿಡುಗಡೆಯಾದ ಬಳಿಕ ಆಕೆಯ ಪರ ವಕೀಲ ಜಗದೀಶ್ ಕೆ. ಎನ್. ಮಹಾದೇವ್ ಅವರು ಫೇಸ್ ಬುಕ್ ಲೈವ್ ಮೂಲಕ ಮಾತನಾಡಿದರು. “ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದಲೇ ಲಿಖಿತ ದೂರನ್ನು ನೀಡಿದ್ದಾಳೆ. ಅದನ್ನು ಮಧ್ಯಾಹ್ನ 2.30ಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೀಡುತ್ತೇವೆ” ಎಂದರು.

 

“ನಾವು ಯುವತಿಗೆ ಕಾನೂನು ರಕ್ಷಣೆ ಕೊಡುತ್ತೇವೆ ಎಂದು ನಾವು ಬಹಿರಂಗವಾಗಿ ಹೇಳಿದ್ದೆವು. ಆಕೆ ಸಹ ನಮಗೆ ರಕ್ಷಣೆ ಬೇಕು ಎಂದು ವಿಡಿಯೋ ಬಿಡುಗಡೆ ಮಾಡಿದ್ದಳು” ಎಂದು ವಕೀಲ ಜಗದೀಶ್ ಹೇಳಿದರು.

 

“ಯುವತಿ ನಮಗೆ ಲಿಖಿತ ದೂರನ್ನು ನೀಡಿದ್ದಾಳೆ. ಅದನ್ನು ನಾವು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೀಡುತ್ತೇವೆ. ಅವರು ಎಸ್‌ಐಟಿಯ ಮುಖ್ಯಸ್ಥರು ಸಹ ಆಗಿದ್ದಾರೆ. ಅವರಿಗೆ 2.30ಕ್ಕೆ ಅವರನ್ನು ಭೇಟಿ ಮಾಡಿ ದೂರನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತೇವೆ” ಎಂದು ಹೇಳಿದರು.

“ಈ ದೂರಿನ ವಿರುದ್ಧ ಕ್ರಮ ಆದರೆ ಸರ್ಕಾರ, ಪೊಲೀಸರು ಆಕೆಗೆ ರಕ್ಷಣೆ ಕೊಡುತ್ತದೆ ಎಂಬ ನಂಬಿಕೆ ಬಂದರೆ ಎರಡು ದಿನದಲ್ಲಿ ಯುವತಿ ಬರಬಹುದು. ಪೊಲೀಸರ ಮುಂದೆ ಸ್ವತಃ ಹೇಳಿಕೆ ನೀಡಲಿದ್ದಾಳೆ” ಎಂದು ವಕೀಲರು ಹೇಳಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ