Breaking News

ಐದು ನೋಟಿಸ್ ಗಳಿಗೂ ಯುವತಿಯಿಂದ ನೋ ರೆಸ್ಪಾನ್ಸ್ :ವಿಧಾನಸೌಧಕ್ಕೆ ದೌಡಾಯಿಸಿದ ಎಸ್ ಐಟಿ ಅಧಿಕಾರಿಗಳು

Spread the love

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಎಸ್‌ಐಟಿ ತನಿಖೆ ಗಂಟೆಗೊಂದು ಟ್ವಿಸ್ಟ್ ಗಳನ್ನು ಪಡೆಯುತ್ತಿದ್ದು, ಸಾಲು ಸಾಲು ಸುದ್ದಿಗಳು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರಕರಣದ ಕುರಿತು ತನಿಖೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಇಮೇಲ್​ನಲ್ಲಿ ಕಳುಹಿಸಿದ್ದ ನೋಟಿಸ್​ನ್ನು ಯುವತಿ ನೋಡಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆದರೆ, ಪೊಲೀಸರ ನೋಟಿಸ್​ಗೆ ಆಕೆಯಿಂದ ಯಾವುದೇ ಉತ್ತರ ದೊರೆತಿಲ್ಲ ಎನ್ನಲಾಗ್ತಿದೆ.

ಸಿಡಿ ಲೇಡಿಗೆ ಮತ್ತೊಂದು ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆದಿದ್ದು, ಎಸ್ ಐ ಟಿ ಅಧಿಕಾರಿಗಳು ದೇಶದೆಲ್ಲೆಡೆ ಹುಡುಕಾಟವನ್ನು ಮುಂದುವರೆಸಿದ್ದಾರೆ. ನೋಟಿಸ್ ತಲುಪಿದ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ವಾಟ್ಸಪ್, ಇ ಮೇಲ್ ಮೂಲಕ ಸಂದೇಶ ರವಾನಿಸಲಾಗಿದ್ದು, ಇದುವರೆಗೆ ಯುವತಿಗೆ ಒಟ್ಟು ಐದು ನೋಟಿಸ್ ಜಾರಿ ಮಾಡಿದಂತಾಗಿದೆ.

ವಿಧಾನಸೌಧ ತಲುಪಿದ ಎಸ್‌ಐಟಿ ತಂಡ : ಈ ನಡುವೆ ಎಸ್ ಐ ಟಿ ಅಧಿಕಾರಿಗಳು ವಿಧಾನಸೌಧಕ್ಕೆ ತಲುಪಿ ಮುಖ್ಯಮಂತ್ರಿ, ಗೃಹ ಸಚಿವರಿಗೆ ಮಾಹಿತಿ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಸಿಡಿ ವಿಚಾರದಲ್ಲಿ ಎತ್ತುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಿಎಂ ಯಡಿಯೂರಪ್ಪ ಅವರು ಎಸ್‌ಐಟಿ ಅಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ