Breaking News

224-225 ಜನರಲ್ಲಿ ಎಲ್ಲರೂ ಶ್ರೀರಾಮಚಂದ್ರ-ಸೀತಾ ಮಾತೆಯರೇ ಅಲ್ಲ: ಬಿ.ಸಿ ಪಾಟೀಲ್

Spread the love

ಬೆಂಗಳೂರು: 224-225 ಜನರಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಅವರೆಲ್ಲರೂ ಶ್ರೀರಾಮಚಂದ್ರ, ಸೀತಾ ಮಾತೆಯರೇ ಅಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ‘224-225 ಜನರಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಎಲ್ಲರೂ ಶ್ರೀರಾಮಚಂದ್ರ, ಸೀತಾ ಮಾತೆಯರೇ ಅಲ್ಲ. ಯಾವ ಸಚಿವರು ಹೇಳಿಕೆ ನೀಡಿದ್ರೂ ಎಲ್ಲರೂ ಅವ್ರವ್ರ ಆತ್ಮ ಮುಟ್ಟಿ ನೋಡಿಕೊಳ್ಳಲಿ’ ಎಂದು ಹೇಳಿದರು.

ಒಂದು ಬೆರಳು ಒಬ್ಬರ ಕಡೆ ತೋರಿಸಿದ್ರೆ, ಉಳಿದ ನಾಲ್ಕು ಬೆರಳು ನಮ್ಮ ಕಡೆಗೆ ತೋರಿಸುತ್ವೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಸತ್ಯಹರಿಚಂದ್ರರಂತೆ ಮಾತನಾಡುವುದು ಸರಿಯಲ್ಲ. ಸುಮ್ಮನೆ ಮುಂದೆ ಹೋಗುವುದು ಒಳ್ಳೆಯದು ಎಂದು ಹೇಳಿದ್ರು.

 

ಅಂದ್ಹಾಗೆ, ಸಿಡಿ ಪ್ರಕರಣ ಸಂಬಂಧ ಸದನದಲ್ಲಿ ಕಾಂಗ್ರೆಸ್​ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿಧಾನಸೌಧದ 225 ಶಾಸಕರ ಮೇಲೂ ತನಿಖೆಯಾಗಲಿ ಎಂದು ಆರೋಗ್ಯ ಸಚಿವ ಸುಧಾಕರ್ ಅವ್ರು ಹೇಳಿದ್ರು. ಅವ್ರ ಮಾತಿಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ದನಿಗೂಡಿಸಿದ್ರು.


Spread the love

About Laxminews 24x7

Check Also

ಏಪ್ರಿಲ್-ಮೇ ತಿಂಗಳಲ್ಲಿ ಗ್ರಾಪಂ ಚುನಾವಣೆಗೆ ಸರಕಾರ ಸಜ್ಜು: ಶೀಘ್ರವೇ ಮೀಸಲು ಅಧಿಸೂಚನೆ ಪ್ರಕಟ

Spread the loveಧಾರವಾಡ: ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಮುಗಿಯಲಿದೆ. ಹೀಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ