Breaking News

ಪರೀಕ್ಷಾ ಪೇ ಚರ್ಚಾ’ಗೆ ಆಯ್ಕೆ: ಆರ್ಡಿ ಶಾಲೆಯ ಅನುಷಾಗೆ ಅಭಿನಂದನೆ ಸಲ್ಲಿಸಿದ ಸುರೇಶ್ ಕುಮಾರ್

Spread the love

ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾದ ಉಡುಪಿ ಜಿಲ್ಲೆಯ ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅನುಷಾಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.

ಅನುಷಾಗೆ ಕರೆ ಮಾಡಿದ ಸಚಿವರು, ಪ್ರಧಾನಿಯವರ ಜೊತೆ ಮಾತನಾಡಲು ನೀನು ಆಯ್ಕೆಯಾಗಿರುವುದು ನಮಗೆ ಖುಷಿಯಾಗಿದೆ. ನೀನು ಶಾಲೆಗೆ ಮತ್ತು ರಾಜ್ಯಕ್ಕೆ ಹೆಮ್ಮೆ ತರಬೇಕು ಎಂದು ಹೇಳಿದರು.

 

‘ಪರೀಕ್ಷಾ ಪೇ ಚರ್ಚಾ’ ಗೆ ದೇಶಾದ್ಯಂತ ಆಯ್ಕೆಯಾಗಿರುವ ಮೂವತ್ತು ಶಾಲೆಗಳಲ್ಲಿ ಆರ್ಡಿ- ಅಲ್ಬಾಡಿ ಶಾಲೆಯೂ ಒಂದು. ಕರ್ನಾಟಕದಿಂದ ಬೆಂಗಳೂರಿನ ಒಂದು ಮತ್ತು ಆರ್ಡಿ ಶಾಲೆ ಮಾತ್ರ ಆಯ್ಕೆಯಾಗಿವೆ.

ಗುಡ್ಡೆಯಂಗಡಿ ನಿವಾಸಿ ಕೃಷ್ಣ ಕುಲಾಲ್‌-ಜಯಲಕ್ಷ್ಮೀ ದಂಪತಿಯ ಪುತ್ರಿ ಅನುಷಾ ಅಲ್ಬಾಡಿ -ಆರ್ಡಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಈಕೆ ಭವಿಷ್ಯದಲ್ಲಿ ಎಂಜಿನಿಯರಿಂಗ್‌ ಮಾಡುವ ಕನಸು ಹೊಂದಿದ್ದಾರೆ.

 


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ