Breaking News

ಸಿಡಿಯಲ್ಲಿರುವ ಧ್ವನಿ ಚಿಕ್ಕಮಗಳೂರು ಮೂಲದ ವ್ಯಕ್ತಿಯದ್ದಾಗಿದೆ ಎಂಬ ಶಂಕೆ?

Spread the love

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಎಸ್ ಐ ಟಿ ಯುವತಿ ಹಾಗೂ ಸಿಡಿ ಮಾಸ್ಟರ್ ಮೈಂಡ್ ಹುಡುಕಾಟದಲ್ಲಿ ನಿರತವಾಗಿದೆ. ಈ ನಡುವೆ ಸಿಡಿಯಲ್ಲಿರುವ ಧ್ವನಿ ಚಿಕ್ಕಮಗಳೂರು ಮೂಲದ ವ್ಯಕ್ತಿಯದ್ದಾಗಿದೆ ಎಂಬ ಶಂಕೆ ಮೂಡಿದೆ.

ವ್ಯಕ್ತಿಯ ದ್ವನಿಗೂ ಸಿಡಿಯಲ್ಲಿರುವ ಧ್ವನಿನೂ ಸಾಮ್ಯತೆ ಇರುವುದರಿಂದ ಈಗಾಗಲೇ ಎಸ್ ಐ ಟಿ ವ್ಯಕ್ತಿಯ ಧ್ವನಿ ಸಂಗ್ರಹಿಸಿದ್ದು, ಧ್ವನಿ ಸ್ಯಾಂಪಲ್ ನ್ನು ಎಫ್‌ಎಸ್‌ಎಲ್ ಗೆ ಕಳುಹಿಸಲಾಗಿದೆ. ಇಂದು ವರದಿ ಬರುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ವಿಡಿಯೋದಲ್ಲಿನ ಧ್ವನಿ ಚಿಕ್ಕಮಗಳೂರು ಮೂಲದ ವ್ಯಕಿಯದ್ದೇ ಎಂಬುದು ಸಾಬೀತಾದಲ್ಲಿ ತಕ್ಷಣ ವ್ಯಕ್ತಿಯನ್ನು ಬಂಧಿಸಲಾಗುತ್ತದೆ.

ಒಟ್ಟಾರೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಎಸ್ ಐ ಟಿ, ಶೀಘ್ರದಲ್ಲಿಯೇ ಪ್ರಕರಣ ಭೇದಿಸುವ ಸಾಧ್ಯತೆಯಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ