Breaking News

ಸುಧಾಕರ್ ಅವರ ಕಚೇರಿ ಮುಂದೆ ನಾನು ಪ್ರತಿಭಟನೆ ಮಾಡುತ್ತೇನೆ: ರೇಣುಕಾಚಾರ್ಯ

Spread the love

ಬೆಂಗಳೂರು (ಫೆ. 26): ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಂಪುಟ ವಿಸ್ತರಣೆಯ ಸಮಯದಿಂದಲೂ ತಮ್ಮ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಮತ್ತೊಮ್ಮೆ ಸರ್ಕಾರದ ಕೆಲವು ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿರುವ ಅವರು ತಮ್ಮದೇ ಸರ್ಕಾರದ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೀವಾ? ಕೆಲವು ಸಚಿವರು ಕೈಗೇ ಸಿಗೋದಿಲ್ಲ. ಅವರ ಪಿ.ಎಗಳು, ಪಿ.ಎಸ್​ಗಳು ಫೋನೇ ರಿಸೀವ್ ಮಾಡಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಬಂದ ಎಲ್ಲ ಸಚಿವರು ಇದೇ ರೀತಿ ಮಾಡುತ್ತಿದ್ದಾರೆ ಎಂದು ನಾನು ಹೇಳುವುದಿಲ್ಲ. ಕೆಲವರು ಮಾತ್ರ ನಮಗೆ ಕೈಗೆ ಸಿಗೋದಿಲ್ಲ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಹೊನ್ನಾಳಿ ಕ್ಷೇತ್ರದ ಕೆಲಸ ಮಾಡಿಸಿಕೊಡುವಂತೆ ನಾನು ಸಚಿವ ಡಾ. ಸುಧಾಕರ್ ಅವರನ್ನು ಹತ್ತಾರು ಭಾರಿ ಭೇಟಿ ಆಗಿದ್ದೇನೆ, ಪತ್ರ ಬರೆದಿದ್ದೇನೆ. ಆದರೂ ಏನೂ ಪ್ರಯೋಜನ ಆಗಿಲ್ಲ. ಅವರು ಇನ್ನೂ ಇದೇ ರೀತಿ ವರ್ತಿಸಿದರೆ ಸುಧಾಕರ್ ಅವರ ಕಚೇರಿ ಮುಂದೆ ನಾನು ಪ್ರತಿಭಟನೆ ಮಾಡುತ್ತೇನೆ ಎಂದು ರೇಣುಕಾಚಾರ್ಯ ಎಚ್ಚರಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಶೇ. 5ರಷ್ಟು ಹೆಚ್ಚಳ : ಬೇಡಿಕೆ ಮೀರಿದ ಉತ್ಪಾದನೆ ನೆರೆರಾಜ್ಯಗಳಿಗೆ ಮಾರಾಟ, ರೈತರಿಗೂ ಲಾಭ

Spread the loveಬೆಂಗಳೂರು : ರಾಜ್ಯದಲ್ಲಿ ವಾರ್ಷಿಕ ವಿದ್ಯುತ್‌ ಉತ್ಪಾದನೆಯು ಶೇ.5ರಷ್ಟು ಹೆಚ್ಚಳವಾಗಿದ್ದು, ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್‌ಗೆ ಬರವಿಲ್ಲ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ