Breaking News

ಬ್ರಾಹ್ಮಣರು, ವೈದಿಕ ಆಚರಣೆ ಕುರಿತ ವಿವಾದಿತ ಪಠ್ಯ ಕಡಿತಕ್ಕೆ ನಿರ್ಧಾರ

Spread the love

ಬೆಂಗಳೂರು: ಬ್ರಾಹ್ಮಣರು ಮತ್ತು ವೈದಿಕ ಆಚರಣೆಗಳ ಕುರಿತಾದ ವಿವಾದಿತ ಪಾಠಗಳನ್ನು ಪ್ರಸಕ್ತ ಸಾಲಿಗೆ ಕೈಬಿಡಲು ರಾಜ್ಯ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ತಿರ್ಮಾನಿಸಿದೆ.

ವೈದಿಕ ಆಚರಣೆಯಲ್ಲಿ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು ಎಂಬುದು ಸೇರಿದಂತೆ ಬ್ರಾಹ್ಮಣರು ಮತ್ತು ವೈದಿಕ ಆಚರಣೆಗಳು ಕುರಿತ ವಿವಾದಕ್ಕೆ ಕತ್ತರಿ ಹಾಕಲಾಗುವುದು. ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ -1 ಧರ್ಮಗಳ ಉದಯ ಪಾಠದಲ್ಲಿ ಬ್ರಾಹ್ಮಣರ ಬಗ್ಗೆ ವೈದಿಕ ಆಚರಣೆ ಬಗ್ಗೆ ವಿವಾದಿತ ಅಂಶಗಳಿದ್ದು, ಇದನ್ನು ಕಲಿಸುವುದರಿಂದ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಕೈಬಿಡಬೇಕೆಂದು ಬ್ರಾಹ್ಮಣ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಸಂಘಟನೆಗಳು ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ವಿವಾದಾತ್ಮಕ ಪಠ್ಯ ಕೈಬಿಡಲಾಗುವುದು ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ