Breaking News

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ : ಭತ್ತ, ರಾಗಿ, ತೊಗರಿ, ಶೇಂಗಾ, ಕಡಲೆಗೆ ‘ಬೆಂಬಲ ಬೆಲೆ’ ನಿಗದಿ

Spread the love

ಬೆಂಗಳೂರು : 2020-21ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆಯೊಜನೆಯಡಿಯಲ್ಲಿ ಭತ್ತ, ರಾಗಿ, ಬಿಳಿಜೋಳ, ತೊಗರಿ, ಶೇಂಗಾ ಹಾಗೂ ಕಡೆಲೆ ಖರೀದಿಗೆ, ಇಂದು ನಡೆದಂತ ಸಂಪುಟ ಉಪ ಸಮಿತಿ ಸಭೆಯಲ್ಲಿ ದರ ನಿಗದಿ ಪಡಿಸಲಾಗಿದೆ. ಈ ಮೂಲಕ ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.

ಇಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆಗಳ ಸ್ಥಿರಿಕರಣಕ್ಕಾಗಿ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಸಚಿವ ಸಂಪುಟದ ಉಪ ಸಮಿತಿ ಸಭೆ ನಡೆಯಿತು.

ಇಂತಹ ಸಭೆಯಲ್ಲಿ 2020-21ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರತಿ ಕ್ವಿಂಟಾಲ್ ಭತ್ತ, ಬಿಳಿಜೋಳ, ರಾಗಿ, ತೊಗಲಿ, ಶೇಂಗಾ ಹಾಗೂ ಕಡಲೆಗೆ ಬೆಂಬಲ ಬೆಲೆ ನಿಗದಿ ಪಡಿಸಲಾಯಿತು. ಅಲ್ಲದೇ ಭತ್ತವನ್ನು ಬೆಂಬಲ ಬೆಲೆ ಯಡಿ ಖರೀದಿಸಲು ವಿಧಿಸಲಾಗಿದ್ದಂತ 25 ಕ್ವಿಂಟಾಲ್ ಮಿತಿಯನ್ನು ಮುಂದುವರೆಸುತ್ತಾ, ಗರಿಷ್ಟ ಮಿತಿಯನ್ನು ತೆಗೆದು ಹಾಕಲಾಗಿದೆ.

ಇದೇ ರೀತಿಯಾಗಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಖರೀದಿ ಪ್ರಮಾಣವನ್ನು ನಿಗದಿ ಪಡಿಸಲಾಗಿದ್ದು, ಸದರಿ ನಿಬಂಧನೆಯನ್ನು ಸಡಿಲಿಸಿ, ಪ್ರತಿ ಎಕರೆಗೆ 10 ಕ್ವಿಂಟಾಲ್ ಮಿತಿಯನ್ನು ಮುಂದುವರೆಸಲಾಗಿದ್ದು, ಗರಿಷ್ಟ ಮಿತಿಯನ್ನು ತೆಗೆದು ಹಾಕಲಾಗಿದೆ.

ಹೀಗಿದೆ 2020-21ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಘೋಷಿಸಲಾಗಿರುವ ದರ ಪಟ್ಟಿ

  • ಭತ್ತ – ಸಾಮಾನ್ಯ – ಪ್ರತಿ ಕ್ವಿಂಟಾಲ್ ಗೆ ರೂ.1,868
  • ಭತ್ತ – ಎ ಗ್ರೇಡ್ – ರೂ.1,888
  • ಬಿಳಿಜೋಳ, ಹೈಬ್ರಿಡ್ – ರೂ.2,620
  • ಬಿಳಿಜೋಳ, ಮಾಲ್ದಂಡಿ – ರೂ.2,640
  • ರಾಗಿ – ರೂ.3,295
  • ತೊಗರಿ – ರೂ.6,000
  • ಶೇಂಗಾ – ರೂ.5,275
  • ಕಡಲೆ – ರೂ.5,100

Spread the love

About Laxminews 24x7

Check Also

ಟ್ರೆಂಡ್‌ ಗೀಳಿಗೆ ಬಿದ್ದು ಟ್ರ್ಯಾಪ್‌ ಆಗ್ಬೇಡಿ – 80s ಫೋಟೊ ಟ್ರೆಂಡ್‌ ಬಗ್ಗೆ ಪೊಲೀಸರ ಎಚ್ಚರಿಕೆ!

Spread the loveನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಟ್ರೆಂಡ್ ಆಗುತ್ತಿರುವ 80ರ ದಶಕದ ಫೋಟೋ ಎಡಿಟಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ