Breaking News

ಮನೆ ಕಟ್ಟೋರಿಗೆ ಶುಭಸುದ್ದಿ : ಕಡಿಮೆಯಾಗಲಿದೆ ಜಲ್ಲಿಕಲ್ಲು, ಎಂಸ್ಯಾಂಡ್ ಮರಳು ಬೆಲೆ

Spread the love

ಬೆಂಗಳೂರು : ರಾಜ್ಯ ಹೈಕೋರ್ಟ್ ಜಲ್ಲಿಕಲ್ಲು, ಎಂಸ್ಯಾಂಡ್‌ಗೆ ವಿಧಿಸಲಾಗುತ್ತಿದ್ದಂತ ಅಂತಾರಾಜ್ಯ ತೆರಿಗೆ ರದ್ದುಪಡಿಸಿದೆ. ಹೀಗಾಗಿ ರಾಜ್ಯದಲ್ಲಿ ಜಲ್ಲಿ ಕಲ್ಲು, ಎಂಸ್ಯಾಂಡ್ ಮರಳಿನ ದರದಲ್ಲಿ ಮತ್ತಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಈ ಮೂಲಕ ಮನೆ ಕಟ್ಟೋರಿಗೆ ಗುಡ್ ನ್ಯೂಸ್ ದೊರೆತಂದೆ ಆಗಿದೆ.

ಕರ್ನಾಟಕ ಹೈಕೋರ್ಟ್, ಜಲ್ಲಿಕಲ್ಲು, ಎಂಸ್ಯಾಂಡ್‌ಗೆ ಅಂತಾರಾಜ್ಯ ತೆರಿಗೆ ರದ್ದುಪಡಿಸಬೇಕೆಂದು ಆದೇಶ ನೀಡಿದೆ. ರಾಜ್ಯಸರ್ಕಾರದ ತಿದ್ದುಪಡಿಯನ್ನು ರದ್ದುಪಡಿಸಿರುವ ಉಚ್ಛನ್ಯಾಯಾಲಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರವಿಲ್ಲವೆಂದು ತೀರ್ಪು ನೀಡಿದೆ. 2020ರ ಜೂನ್.30ರಂದು ಈ ಬಗ್ಗೆ ತಿದ್ದುಪಡಿ ತಂದಿದ್ದ ಸರ್ಕಾರ ಮೆಟ್ರಿಕ್ ಟನ್‌ಗೆ ರೂ.70ರಂತೆ ತೆರಿಗೆ ನೀಡಬೇಕೆಂದು ನಿಯಮ ರೂಪಿಸಿತ್ತು. ಇದನ್ನು ಪ್ರಶ್ನಿಸಿ ಹಲವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಇಂತಹ ಅರ್ಜಿಯ ವಿಚಾರಣೆ ನಡೆಸಿದಂತ ರಾಜ್ಯ ಹೈಕೋರ್ಟ್ ಪೀಠವು, 2020ರ ಜೂನ್ 30ರಂದು ತಿದ್ದುಪಡಿ ತಂದು, ಮೆಟ್ರಿಕ್ ಟನ್ ಗೆ ರೂ.70ರಂತೆ ವಿಧಿಸುತ್ತಿದ್ದಂತ ಅಂತರಾಜ್ಯ ತೆರಿಗೆಯನ್ನು ರದ್ದು ಪಡಿಸಿ, ಆದೇಶಿಸಿದೆ. ಇದರಿಂದಾಗಿ ಜಲ್ಲಿಕಲ್ಲು, ಎಂಸ್ಯಾಂಡ್ ಮರಳಿನ ಬೆಲೆ ಕಡಿಮೆ ಆಗಲಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ