Breaking News

ಕಿತ್ತೂರು ಸಮೀಪದ ಕುಲ್ಲಹಳ್ಳಿ ಜಂಗಲ್ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ತಲೆಮರಿಸಿಕೊಂಡಿದ್ದ ಬೇಟೆಗಾರನ ಮನೆಗೆ ಇಂದು ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ದಾಳಿ

Spread the love

ಬೆಳಗಾವಿ- ಕಿತ್ತೂರು ಸಮೀಪದ ಕುಲ್ಲಹಳ್ಳಿ ಜಂಗಲ್ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ತಲೆಮರಿಸಿಕೊಂಡಿದ್ದ ಬೇಟೆಗಾರನ ಮನೆಗೆ ಇಂದು ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಳಗಾವಿಯ ಅಶೋಕ ನಗರದಲ್ಲಿ ಮೆಹಮೂದ್ ಅಲಿ ಖಾನ್ (50) ವರ್ಷದ ಬೇಟೆಗಾರನ ಮನೆಗೆ ದಾಳಿ ಮಾಡಿರುವ ಅರಣ್ಯ ಅಧಿಕಾರಿಗಳು ಬೇಟೆ ಆಡಲು ಬಳಿಸುವ ರೈಫಲ್,ಜೀವಂತ ಗುಂಡು,ಚಾಕೂ,ಚೂರಿ,ಟಾರ್ಚ್..ವಾಕಿ ಟಾಕಿ,ಮತ್ತು ದುರ್ಬಿ‌ನ್,ಮತ್ತು ವಾಹನಕ್ಕೆ ಅಳವಡಿಸುವ ಸರ್ಚ ಲೈಟ್ ,ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಇಂದು ಬೆಳಗ್ಗೆ ಬೇಟೆಗಾರನ ಮನೆಯಲ್ಲೇ ಅರಣ್ಯ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು ಇತ್ತೀಚಿಕೆ ಜಿಂಕೆ ಬೇಟೆಯಾಡಿದ ಪ್ರಕರಣಕ್ಕೆ ಸಮಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು,ಇಬ್ಬರು ಚಾಲಾಕಿ ಗಿರಾಕಿಗಳು ತಲೆಮರಿಸಿಕೊಂಡಿದ್ದರು,ನಾಗರಗಾಳಿ,ಮತ್ತು ಬೆಳಗಾವಿ ಉಪ ವಿಭಾಗದ ಅರಣ್ಯಾಧಿಕಾರಿಗಳು ಇಂದು ರೇಡ್ ಮಾಡಿ ಜಂಗಲ್ ನಲ್ಲಿ ಬೇಟೆಯಾಡುತ್ತಿದ್ದ ಬೇಟೆಗಾರ ಮೆಹಮೂದ್ ಅಲಿ ಖಾನ್ ಅರಣ್ಯ ಅಧಿಕಾರಿಗಳ ಕಣ್ಣು ತಪ್ಪಸಿ ಓಡಿ ಹೋಗಿದ್ದಾನೆ..ಬೇಟೆಯಾಡಲು ಆತ ಉಪಯೋಗಿಸುತ್ತಿದ್ದ ಸಾಮಾನುಗಳು ಮಾತ್ರ ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿವೆ. ಬೇಟೆಗಾರ ಇವತ್ತೂ ಪರಾರಿಯಾಗಿದ್ದು ವಿಶೇಷ…


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ