ಗದಗ: ಕಳೆದ ಒಂಬತ್ತು ತಿಂಗಳ ನಂತರ ರಾಜ್ಯಾದ್ಯಂತ ಶಾಲೆ ಆರಂಭವಾಗಿವೆ. ಮಕ್ಕಳು ಸಹ ಉತ್ಸಾಹದಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಟೆನ್ಶನ್ ಆರಂಭವಾಗಿದೆ. ಹೌದು ಮಕ್ಕಳು ಹೊಸ ಹುರುಪಿನಿಂದ ಶಾಲೆಗೆ ಬರ್ತಾಯಿದ್ದಾರೆ. ಆದರೆ ಗದಗ ಜಿಲ್ಲೆಯಲ್ಲಿ ವಿದ್ಯೆ ಕಲಿಸುವ ಗುರುಗಳಿಗೆ ಕೊರೋನಾ ಅಟ್ಯಾಕ್ ಮಾಡಿದೆ. ಹೀಗಾಗಿ ಶಿಕ್ಷಕರು ಹೋಮ್ ಕ್ವಾರಂಟೈನ್ ಆಗಿದ್ದು, ವಿದ್ಯಾರ್ಥಿಗಳು ಅತಂತ್ರವಾಗಿದ್ದಾರೆ.
ಶಾಲೆ ಆರಂಭವಾಗುತ್ತಿದ್ದಂತೆ ಗದಗ ಜಿಲ್ಲೆಯಲ್ಲಿ ಮಕ್ಕಳು ಹೊಸ ಉತ್ಸಾಹದಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ, ಜಿಲ್ಲೆಯ ಹತ್ತು ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಹೀಗಾಗಿ ಜಿಲ್ಲೆಯ ಐದು ಶಾಲೆಗಳು ಓಪನ್ ಆಗಿಲ್ಲಾ. ಗದಗ ನಗರದ ನಾಲ್ಕು ಹಾಗೂ ನರಗುಂದ ತಾಲೂಕಿನ ಜಗಾಪೂರ ಗ್ರಾಮದ ಪ್ರೌಢಶಾಲೆಯ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಹೀಗಾಗಿ ಶಾಲೆಗೆ ಬಂದ ಮಕ್ಕಳು ವಾಪಸ್ ಮನೆಗೆ ತೆರಳಿದ್ದಾರೆ.
ಶಿಕ್ಷಣ ಇಲಾಖೆ ಐದು ಶಾಲೆಗಳಿಗೆ ಮತ್ತೊಮ್ಮೆ ಸ್ಯಾನಿಟೈಸರ್ ಮಾಡಲಾಗಿದೆ. ಜಿಲ್ಲೆಯಾದ್ಯಂತ 6665 ಶಿಕ್ಷಕರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಈ ಪೈಕಿ 10 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಸದ್ಯ ಶಿಕ್ಷಕರು ಹೋಮ್ ಕ್ವಾರಂಟೈನ್ ಆಗಿದ್ದು, ಮುಂದೆ ಆರೋಗ್ಯ ಇಲಾಖೆಯ ಸಲಹೆ ಮೇರೆಗೆ, ಶಾಲೆ ಓಪನ್ ಮಾಡುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಗದಗ ಜಿಲ್ಲೆಯ ಡಿಡಿಪಿಐ ಬಸವಲಿಂಗಪ್ಪ ಹೇಳಿದರು.ಕೊರೋನಾ ಆತಂಕದ ನಡುವೆ ಶಾಲೆ ಹಾಗೂ ಪಿಯುಸಿ ಕಾಲೇಜು ಆರಂಭವಾಗಿವೆ. ಮಕ್ಕಳು ಹಾಗೂ ಪೋಷಕರು ಕೊರೋನಾ ಭಯದಲ್ಲಿಯೇ ಶಾಲೆಗೆ ಆಗಮಿಸಿದ್ದಾರೆ. ಆದರೆ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ 10 ಶಿಕ್ಷಕರು ಕಿಲ್ಲರ್ ಕೊರೋನಾ ದೃಢವಾಗಿದ್ದು, ಮಕ್ಕಳು ಹಾಗೂ ಪೋಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶಾಲೆ ಆರಂಭವಾಗುತ್ತಿದ್ದಂತೆ ಕೊರೋನಾ ಬಂದಿರುವುದರಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹಿಂದೇಟು ಹಾಕ್ತಾಯಿದ್ದಾರೆ. ಇನ್ನೂ ಮಕ್ಕಳು ಸಹ ಶಾಲೆಗೆ ಹೋಗಲು ಭಯ ಪಡ್ತಾಯಿದ್ದಾರೆ.
Laxmi News 24×7