Breaking News

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಮುಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದುರ್ಬಲರಾಗಿದ್ದಾರೆ : ಡಿ.ಕೆ.ಶಿ

Spread the love

ಬೆಂಗಳೂರು, – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಮುಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದುರ್ಬಲರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಕಫ್ರ್ಯೂ ಜಾರಿಗೆ ತರುವಾಗ ಯಾವ ಮಂತ್ರಿಯ ಮಾತನ್ನು ಕೇಳಿಲ್ಲ.

ಒಬ್ಬ ಸಚಿವ ಹೇಳಿದ ಎಂಬ ಕಾರಣಕ್ಕೆ ಯಡಿಯೂರಪ್ಪ ಸಹಿ ಮಾಡಿದ್ದರು. ಕೊನೆಗೆ ಅವರದೇ ಸರ್ಕಾರದ ಸಚಿವರು, ಪಕ್ಷದವರು ಟೀಕಿಸಿದರೆ ಎಂಬ ಕಾರಣಕ್ಕೆ ಹಿಂಪಡೆದಿದ್ದಾರೆ. ನಾವು ಹೇಳಿದ್ದೇವೆ ಎಂಬ ಕಾರಣಕ್ಕೆ ಹಿಂಪಡೆದಿಲ್ಲ ಎಂದು ಹೇಳಿದರು. ಕೊರೊನಾದಿಂದ ಕಳೆದ ಒಂದು ವರ್ಷದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುವಕರು ಉದ್ಯೋಗ ಇಲ್ಲದೆ ಪರಿತಪ್ಪಿಸುತ್ತಿದ್ದಾರೆ.

ಸರ್ಕಾರ ರಾತ್ರಿ 11ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕಫ್ರ್ಯೂ ಜಾರಿಗೆ ತಂದರೆ ಸೋಂಕು ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದ ತಜ್ಞರು ಯಾರು ? ಅವರ ಫೋಟೋ ಕೊಡಿ ಮನೆಯಲ್ಲಿ ಹಾಕಿಕೊಂಡು ದೇವರಪ್ಪಾ ಎಂದು ಪೂಜೆ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು.

ಸುಧಾಕರ್ ಮತ್ತು ಯಡಿಯೂರಪ್ಪ ಅವರ ನಡುವೆ ಏನಿದಯೋ ಗೋತ್ತಿಲ್ಲ. ರಾತ್ರಿ ಕಫ್ರ್ಯೂ ಜಾರಿಗೊಳಿಸುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂಬ ತೀರ್ಮಾನಕ್ಕೆ ಬರುವ ಮುನ್ನಾ ಸಾಮಾನ್ಯ ಜ್ಞಾನ ಬಳಸಬೇಕಿತ್ತು. ಸೋಂಕನ್ನು ನಿಯಂತ್ರಿಸಲು ಬೇರೆ ಬೇರೆ ಕ್ರಮಗಳಿವೆ. ಜನಸಂದಣಿಯನ್ನು ಕಡಿಮೆ ಮಾಡಬೇಕಿತ್ತು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ