Breaking News

ಕೋಟಿ ಕೋಟಿ ಖರ್ಚು ಮಾಡಿ ಮನೆಗಳನ್ನು ನಿರ್ಮಾಣ ಮಾಡಿದರು ಕೂಡ ಸಾರ್ವಜನಿಕರಿಗೆ ಸರಿಯಾಗಿ ಉಪಯೋಗವಾಗುತ್ತಿಲ್ಲ.

Spread the love

ಕೋಟಿ ಕೋಟಿ ಖರ್ಚು ಮಾಡಿ ಮನೆಗಳನ್ನು ನಿರ್ಮಾಣ ಮಾಡಿದರು ಕೂಡ ಸಾರ್ವಜನಿಕರಿಗೆ ಸರಿಯಾಗಿ ಉಪಯೋಗವಾಗುತ್ತಿಲ್ಲ.

ದಾ ಸಾಲಾಪುರ್ ಗ್ರಾಮ ಪಂಚಾಯತಿಯಲ್ಲಿ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿದರು ಕೂಡ ಮಾಡದಂತಾಗಿದೆ.

ದಾ ಸಾಲಾಪುರ ಗ್ರಾಮ ಪಂಚಾಯಿತಿಯಿಂದ 2006 ರಲ್ಲಿ ನವಗ್ರಾಮ ಯೋಜನೆ ಅಡಿಯಲ್ಲಿ 60 ಮನೆಗಳನ್ನು ನಿರ್ಮಾಣ ಮಾಡಿ ಕೈಬಿಟ್ಟಿದ್ದಾರೆ ಹಾಗೂ ಅಲ್ಲಿಂದ ಇಲ್ಲಿಯವರೆಗೆ ಸಾರ್ವಜನಿಕರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ರಸ್ತೆಯ ವ್ಯವಸ್ಥೆ ಹಾಗೂ ಮನೆಗಳಿಗೆ ವಿದ್ಯುತ್ ದೀಪ ಇಲ್ಲದಂತಾಗಿದೆ. ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಿದಾಗ ಕೇವಲ ಎರಡು ತಿಂಗಳು ಮಾತ್ರ ವಾಸ ಮಾಡಿದರು. ಆದರೆ ಅಲ್ಲಿ ಯಾವುದೇ ಸವಲತ್ತುಗಳು ಇಲ್ಲದ ಕಾರಣ ಅಲ್ಲಿದ್ದಂತಹ ಫಲಾನುಭವಿಗಳು ಬೇರೆ ಕಡೆ ಮನೆ ಬಾಡಿಗೆ ಮಾಡಿ ವಾಸಮಾಡುತ್ತಿದ್ದಾರೆ ಮತ್ತು ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ನವಗ್ರಾಮ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿದರು ಸಾರ್ವಜನಿಕರಿಗೆ ಸರಿಯಾಗಿ ಉಪಯೋಗವಾಗುತ್ತಿಲ್ಲ. ಇವಾಗ ಆ ಮನೆಯಲ್ಲಿ ರಾತ್ರಿಯ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಹೇಳಿದರು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ