Breaking News

ರಾಮದುರ್ಗ ತಾಲೂಕು ದಾ ಸಾಲಾಪುರ 3ನೇ ವಾರ್ಡಿನ ಚುನಾವಣೆ ಗ್ರಾಮಸ್ಥರಿಂದ ಬಹಿಷ್ಕಾರ.

Spread the love

ರಾಮದುರ್ಗ ತಾಲೂಕು ದಾ ಸಾಲಾಪುರ 3ನೇ ವಾರ್ಡಿನ ಚುನಾವಣೆ ಗ್ರಾಮಸ್ಥರಿಂದ ಬಹಿಷ್ಕಾರ.

ದಾ ಸಾಲಾಪುರ್ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ 3 ನೇ ವಾರ್ಡಿನಲ್ಲಿ ಚರಂಡಿಯ ನೀರು ರಸ್ತೆಯ ಮೇಲೆ ಮೊಣಕಾಲು ತನಕ ನೀರು ನಿಂತಿದೆ. ಒಂದು ವರ್ಷ ಕಳೆದರೂ ಚರಂಡಿ ಮಾಡದ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಅಲ್ಲಿದ್ದಂತಹ ಗ್ರಾಮಸ್ಥರು ಪಂಚಾಯತಿಗೆ ಚರಂಡಿ ನಿರ್ಮಾಣ ಮಾಡಿ ಎಂದು ಕೇಳಿದರೂ ಕೂಡಾ ಅಲ್ಲಿದ್ದಂತಹ ಸಿಬ್ಬಂದಿಗಳು ಗ್ರಾಮಸ್ಥರಿಗೆ ನೀವೇ ಮಾಡಿಸಿಕೊಳ್ಳಿ ಎಂದು ಉಡಾಪಿ ಮಾತುಗಳನ್ನಾಡುತ್ತಾನೆ. ಹಾಗೂ 3 ನೇ ವಾರ್ಡಿನಲ್ಲಿCC ರಸ್ತೆ ಮಾಡಿದ್ದು ಅದು ಕೂಡ ಕಳಪೆ ಕಾಮಗಾರಿ ಆಗಿದೆಯೆಂದು ಗ್ರಾಮಸ್ಥರು ಆರೋಪ ಮಾಡಿದ್ದರು ಹಾಗೂ ಅಲ್ಲಿ ಬೀದಿ ದೀಪಗಳನ್ನು 24×7 ಸತತವಾಗಿ ಹಚ್ಚಿರುತ್ತಾರೆ. ಇದನ್ನು ಗ್ರಾಮಸ್ಥರು ಕೇಳಿದರೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ನಿಮ್ಮ ಕೆಲಸ ಎಷ್ಟು ಅಷ್ಟೇ ಮಾಡಿಕೊಳ್ಳಿ ಎಂದು ಹೇಳುತ್ತಾರೆ.

ಆದಕಾರಣ ಈ ಸಲ 2020-21ನೇ ಸಾಲಿನ ಚುನಾವಣೆಯಲ್ಲಿ ದಾ ಸಾಲಾಪುರ ಗ್ರಾಮಪಂಚಾಯತಿಯ 3 ನೇ ವಾರ್ಡಿನ ಗ್ರಾಮಸ್ಥರು ಗ್ರಾಮಪಂಚಾಯತಿಯ ಮುಂದೆ ಕುಳಿತುಕೊಂಡು ಬಹಿಷ್ಕಾರ ಹಾಕಿದರು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ