Breaking News

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಮಲತಂದೆ ಮಗುವನ್ನೇ ಕೊಲೆ

Spread the love

ಮಡಿಕೇರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಮಲತಂದೆ ಮಗುವನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ರವಿ ಐದು ವರ್ಷದ ಮಗುವನ್ನು ಕೊಂದಿದ್ದಾನೆ. ಮೈಸೂರು ಜಿಲ್ಲೆಯ ಹುಣುಸೂರಿನ ಲಕ್ಷ್ಮಿ ಎಂಬುವರ ಮಗುವನ್ನು ರವಿ ಕೊಲೆ ಮಾಡಿದ್ದಾನೆ. ಪತಿಯನ್ನು ಬಿಟ್ಟು ಬಂದ ಲಕ್ಷ್ಮಿ ರವಿಯೊಂದಿಗೆ ವಾಸವಿದ್ದಳು. ಕಳೆದ ಆರು ತಿಂಗಳಿಂದ ರವಿ ಹಾಗೂ ಲಕ್ಷ್ಮಿ ಒಟ್ಟಿಗೆ ಇದ್ದರು.
ನಮ್ಮಿಬ್ಬರ ನಡುವೆ ಮಗು ಇರುವುದು ಬೇಡ ಎಂದು ರವಿ ಗಲಾಟೆ ಮಾಡುತ್ತಿದ್ದ. ಇದೇ ವಿಷಯಕ್ಕೆ ರಾತ್ರಿ ಗಲಾಟೆ ಮಾಡಿ ರವಿ ಮಗುವನ್ನು ಕೊಂದಿದ್ದಾನೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ