Breaking News

ಪಂಚತಾರಾ ಹೋಟೆಲ್‍ನ ಕೊಠಡಿಯೊಂದರಲ್ಲಿಆತ್ಮಹತ್ಯೆಗೆ ಶರಣಾಗಿದ್ದಾರೆ.ನಿರೂಪಕಿ

Spread the love

ಚೆನ್ನೈ, ಡಿ.9- ಖಿನ್ನತೆಗೆ ಒಳಗಾಗಿದ್ದ ಕಿರುತೆರೆ ನಟಿ ಹಾಗೂ ನಿರೂಪಕಿಯೊಬ್ಬರು ಚೆನ್ನೈನ ನಜರೆತ ಪೆಟ್ಟೈನಲ್ಲಿರುವ ಪಂಚತಾರಾ ಹೋಟೆಲ್‍ನ ಕೊಠಡಿಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿ.ಜೆ. ಚಿತ್ರಾ (28) ಆತ್ಮಹತ್ಯೆ ಮಾಡಿಕೊಂಡಿರುವ ನಟಿ.

ಇವಿಪಿ ಫಿಲ್ಮ್ ಸಿಟಿಯಲ್ಲಿ ನಿನ್ನೆ ಧಾರಾವಾಹಿಯೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಚಿತ್ರಾ ಆತ್ಮಹತ್ಯೆಗೆ ಶರಣಾಗಿರುವುದು ಕಿರುತೆರೆ ಕಲಾವಿದರು, ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಆಘಾತ ಉಂಟುಮಾಡಿದೆ.

ಪಾಂಡಿಯನ್ ಸ್ಟೋರ್ಸ್ ಧಾರಾವಾಹಿಯ ಮುಲೈ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದ ಚಿತ್ರಾ ಇತ್ತೀಚೆಗಷ್ಟೇ ಉದ್ಯಮಿ ಹೇಮಂತ್ ಎಂಬುವವರಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಹೇಮಂತ್, ಚಿತ್ರೀಕರಣ ಮುಗಿಸಿಕೊಂಡು ಹೋಟೆಲ್‍ಗೆ ಬಂದಿದ್ದ ಚಿತ್ರಾ ಸ್ನಾನ ಮಾಡಿ ಬರುವುದಾಗಿ ಹೋದಳು ಆದರೆ ಎಷ್ಟೇ ಹೊತ್ತಾದರೂ ಆಕೆ ವಾಪಸ್ಸಾಗಿರಲಿಲ್ಲ,ಅನುಮಾನಗೊಂಡು ರೂಂ ಬಳಿ ಹೋಗಿ ನೋಡಿದಾಗ ಬಾಗಿಲು ಲಾಕ್ ಆಗಿತ್ತು, ನಂತರ ನಕಲಿ ಕೀ ಬಳಸಿ ಬೀಗ ತೆಗೆದು ಒಳ ಹೋದಾಗ ಚಿತ್ರಾ ರೂಮ್‍ನಲ್ಲಿದ್ದ ಫ್ಯಾನ್‍ಗೆ ತನ್ನ ಸೀರೆಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ದಿಗ್ಭ್ರಾಂತನಾದೆ ಎಂದು ಹೇಳಿದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ