Breaking News

ಸೋಮವಾರ ಡೆಡ್‍ಲೈನ್ – ಇಲ್ಲವಾದಲ್ಲಿ ಡಿಸೆಂಬರ್‌ವರೆಗೆ ಸಂಪುಟ ವಿಸ್ತರಣೆನೋ ಚಾನ್ಸ್..!

Spread the love

ಬೆಂಗಳೂರು: ಸಂಪುಟ ವಿಸ್ತರಣೆ ಇವತ್ತಾಗುತ್ತೆ, ನಾಳೆಯಾಗುತ್ತೆ ಅಂತ ಕಾಯ್ತಿರೋರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಸಂಪುಟ ಸರ್ಜರಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಹೌದು. ಸಿಎಂ ದೆಹಲಿಯಿಂದ ವಾಪಸ್ಸಾಗಿ ಮೂರು ದಿನಗಳಾದರೂ ಸಿಎಂಗೆ ಇನ್ನೂ ವರಿಷ್ಠರಿಂದ ಕರೆ ಬಂದಿಲ್ಲ. ಸಿಎಂ ಮತ್ತು ಆಕಾಂಕ್ಷಿಗಳು ವರಿಷ್ಠರ ಕರೆಗಾಗಿ ಕಾಯುತ್ತಿದ್ದಾರೆ. ಇಂದು ಅಥವಾ ನಾಳೆ ಕರೆ ಬಂದ್ರೆ ಮಾತ್ರ ಸೋಮವಾರ ಸಂಪಟ ಸರ್ಜರಿ ಸಾಧ್ಯತೆಯಿದೆ.

ಕರೆ ಬರದಿದ್ರೆ ಮತ್ತೆ ಸಂಪುಟ ಸರ್ಜರಿ ಮುಂದೂಡಿಕೆಯಾಗುವುದು ಫಿಕ್ಸ್. ಇಂದು, ನಾಳೆ ಕರೆ ಬರದಿದ್ರೆ ಸಂಪುಟಕ್ಕೆ ಸರ್ಜರಿ ಯಾವಾಗ ನಡೆಯುತ್ತೆ?, ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರೋವರೆಗೂ ನಡೆಯಲ್ವಾ ವಿಸ್ತರಣೆ ಎಂಬ ಪ್ರಶ್ನೆಯೂ ಮೂಡಿದೆ.

ಅಮಿತ್ ಶಾ ಅವರು ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಬರಲಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಲಿವರೆಗೂ ಸಂಪುಟ ಸರ್ಜರಿ ಅನುಮಾನ ಎಂಬಂತಾಗಿದೆ. ಈಗಾಗಲೇ ಕಮಲ ಪಾಳಯದಲ್ಲಿ ಕೂಡ ಅಮಿತ್ ಶಾ ಬರೋವರೆಗೂ ವಿಸ್ತರಣೆ ಡೌಟ್ ಅನ್ನೋ ಚರ್ಚೆ ನಡೀತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ