Breaking News

ನಿಷೇಧವಿದ್ರೂ ಹಣಕ್ಕಾಗಿ ಕಾವೇರಿ ನದಿಯಲ್ಲಿ ಡೇಂಜರಸ್ ತೆಪ್ಪದ ಸವಾರಿ!

Spread the love

ಚಾಮರಾಜನಗರ: ಕೊರೊನಾ ಭಯ, ಲಾಕ್‍ಡೌನ್‍ನಿಂದ ಕಳೆದ ಏಳೆಂಟು ತಿಂಗಳಿನಿಂದ ಮನೆಯಲ್ಲಿಯೇ ಇದ್ದ ಜನ ಈಗ ಪ್ರವಾಸಿ ತಾಣಗಳತ್ತ ಮುಖ ಮಾಡ್ತಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗ ದಂಡೇ ನೆರೆದಿದೆ.

ಮೋಜು ಮಸ್ತಿಯ ಮೂಡ್‍ನಲ್ಲಿರೋ ಜನ ಕೊಂಚ ಮೈಮರೆತಂತೆ ಕಾಣುತ್ತಿದೆ. ಇದನ್ನೇ ಬಂಡವಾಳ ಮಾಡ್ಕೊಂಡಿರೋರು ಜನರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ.

ಹೌದು. ಕಾವೇರಿ ಮೈದುಂಬಿ ಹರಿಯುತ್ತಿದ್ದು ಕೊಳ್ಳೆಗಾಲದ ಭರಚುಕ್ಕಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಇಲ್ಲಿನವರು ಪ್ರವಾಸಿಗರಿಗೆ ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ಭರಚುಕ್ಕಿ, ಮಧ್ಯರಂಗನಾಥಸ್ವಾಮಿ, ಶಿಂಷಾದ ಮಾರಮ್ಮ, ವೆಸ್ಲಿ ಸೇತುವೆ ವೀಕ್ಷಣೆಗೆ ಬರುವ ಪ್ರವಾಸಿಗರು ತೆಪ್ಪದ ಸವಾರಿ ಮಾಡ್ತಿದ್ದಾರೆ.ಲವು ವರ್ಷಗಳ ಹಿಂದೆಯೇ ಇಲ್ಲಿ ತೆಪ್ಪದ ಸವಾರಿಯನ್ನು ನಿಷೇಧಿಸಲಾಗಿದೆ. ಆದರೆ ಇದನ್ನು ಲೆಕ್ಕಿಸದ ಕೆಲವರು ತೆಪ್ಪದ ಸವಾರಿ ನಡೆಸುತ್ತಿದ್ದಾರೆ. ತೆಪ್ಪವೇರೋ ಪ್ರವಾಸಿಗರಿಗೆ ಲೈಫ್ ಜಾಕೆಟ್‍ಗಳನ್ನು ಕೊಡ್ತಿಲ್ಲ. ಸ್ವಲ್ಪ ಹೆಚ್ಚುಕಡಿಮೆಯಾದ್ರೂ ಕಾವೇರಿಯಲ್ಲಿ ಲೀನವಾಗೋದು ಗ್ಯಾರೆಂಟಿಯಾಗಿದೆ. ಇ


Spread the love

About Laxminews 24x7

Check Also

ಹೈಕೋರ್ಟ್‌ನ ಎಸ್‌ಐಟಿ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

Spread the loveಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ  ರಚಿಸಿ ಧಾರವಾಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ