Breaking News

ಸಂಜಯ್ ರಾವತ್ ನನ್ನನ್ನು ಹರಾಮ್‍ಕೋರ್ ಅಂದ, ಉದ್ಧವ್ ನನಗೆ ನಮಕ್ ಹರಾಮ್ ಅಂತ ಹೇಳಿದ್ದಾನೆ.ನಿಮ್ಮ ಕೊಳಕು ಭಾಷಣ, ಅಯೋಗ್ಯತನದ ಪ್ರತೀಕ

Spread the love

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ವಾಕ್ಸಮರ ಮತ್ತೆ ಮುನ್ನಲೆಗೆ ಬಂದಿದೆ. ಭಾನುವಾರ ದಸರಾ ಸಮಾವೇಶದಲ್ಲಿ ಸಿಎಂ ನೀಡಿದ ಹೇಳಿಕೆಯನ್ನ ಖಂಡಿಸಿರುವ ಮಣಿಕರ್ಣಿಕಾ ಸಾಲು ಸಾಲು ಟ್ವೀಟ್ ಗಳ ಮೂಲಕ ತಿರುಗೇಟು ನೀಡಿದ್ದಾರೆ.

ಸಂಜಯ್ ರಾವತ್ ನನ್ನನ್ನು ಹರಾಮ್‍ಕೋರ್ ಅಂದ, ಉದ್ಧವ್ ನನಗೆ ನಮಕ್ ಹರಾಮ್ ಅಂತ ಹೇಳಿದ್ದಾನೆ. ಮುಂಬೈನಲ್ಲಿ ನನಗೆ ಆಶ್ರಯ ಸಿಗದಿದ್ರೆ ನನಗೆ ಊಟವೇ ಸಿಗುತ್ತಿರಲಿಲ್ಲ ಅಂತಾ ಹೇಳ್ತಿದ್ದಾರೆ. ನಿಮಗೆ ನಾಚಿಕೆ ಆಗಬೇಕು, ನಾನು ನಿಮ್ಮ ಮಗನ ವಯಸ್ಸಿನ ಸ್ವಾವಲಂಭಿ ಮಹಿಳೆ. ನಿಮ್ಮ ವ್ಯಕ್ತಿತ್ವವನ್ನ ನೀವು ನೀಡಿದ ಹೇಳಿಕೆಗಳು ತೋರಿಸುತ್ತಿವೆ. ಸ್ವಜನಪಕ್ಷಪಾತದ ಅತಿ ಕೆಟ್ಟ ಉತ್ಪನ್ನವೇ ಮುಖ್ಯಮಂತ್ರಿ ಠಾಕ್ರೆ ಎಂದು ಕಂಗನಾ ಮತ್ತೆ ಏಕವಚನದಲ್ಲಿ ಪ್ರಹಾರ ನಡೆಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ವಿಭಜನೆ ಬಗ್ಗೆ ಸಭೆ ಕರೆದು ಚರ್ಚಿಸುವುದಾಗಿ ಸಿಎಂ ಹೇಳಿದ್ದಾರೆ: ಸತೀಶ್ ಜಾರಕಿಹೊಳಿ

Spread the loveಬೆಳಗಾವಿ: ಬೆಳಗಾವಿಯನ್ನು ವಿಭಜಿಸುವ ಕುರಿತು ಸದನದ ಸಮಯದಲ್ಲಿ ಸಭೆ ಕರೆದು ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಲೋಕೋಪಯೋಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ