Breaking News

ವಾಚ್‍ಮ್ಯಾನ್ ಆಗ್ಲಿಲ್ಲ, ಇನ್ನೂ ಆಸ್ತಿ ಬರ್ದು ಕೊಡ್ತೀರಾ -ಜಮೀರ್‌ಗೆ ಟಾಂಗ್ ನೀಡಿ ಟ್ವೀಟ್

Spread the love

ಮೈಸೂರು: ವಾಚ್‍ಮ್ಯಾನ್ ಆಗುತ್ತೇನೆ ಎಂದು ಆಗಲಿಲ್ಲ. ಇನ್ನೂ ಆಸ್ತಿ ಬರ್ದು ಕೊಡುತ್ತೀರಾ ಎಂದು ಬಿಜೆಪಿ ಶಾಸಕ ರಾಮದಾಸ್ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರನ್ನು ಕುಟುಕಿದ್ದಾರೆ

ಸದ್ಯ ರಾಜ್ಯದಲ್ಲಿ ಬೀರುಗಾಳಿಯಂತೆ ಬೀಸುತ್ತಿರುವ ಡ್ರಗ್ ಪ್ರಕರಣದಲ್ಲಿ ಜಮೀರ್ ಅವರು ಕೊಲಂಬೋಗೆ ಹೋಗಿ ಬಂದಿದ್ದಾರೆ ಎಂಬ ಆರೋಪ ಬಂದಿದೆ. ಈ ವಿಚಾರವಾಗಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಮೀರ್ ಅವರು, ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸಾಬೀತಾದರೆ ನಾನು ನನ್ನೆಲ್ಲ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಟಾಂಗ್ ನೀಡಿ ಟ್ವೀಟ್ ಮಾಡಿರುವ ರಾಮದಾಸ್, ಯಡಿಯೂರಪ್ಪನವರು ಮುಖ್ಯಮಂತ್ರಿ ಆದರೆ ಅವರ ಮನೆ ಮುಂದೆ ನಾನು ವಾಚ್‍ಮ್ಯಾನ್ ಆಗುತ್ತೇನೆ ಎಂದು ಹೇಳಿ ವರ್ಷಗಳು ಉರುಳಿದವು. ಇನ್ನೂ ಅದರ ಕುರುಹು ಕಾಣುತ್ತಿಲ್ಲ. ಇನ್ನು ಸಂಜನಾ ಜೊತೆ ಕೊಲಂಬೋ ಹೋಗಿದ್ದು ಸಾಬೀತಾದರೆ ನೀವು ನಿಜಕ್ಕೂ ಆಸ್ತಿ ಬರೆದುಕೊಡುತ್ತೀರೆ ಜಮೀರ್ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ