Breaking News

ಮಾಜಿ ಗುರು ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ಭೈರತಿ ಬಸವರಾಜ್..!

Spread the love

ಮಾಜಿ ಗುರು ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ಭೈರತಿ ಬಸವರಾಜ್..!

ಗುರುವಿಗೆ ತಿರುಗೇಟು ನೀಡಿದ ನಗರಾಭಿವೃದ್ಧಿ ಸಚಿವರು/ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾರೆ ವಿರೋಧ ಮಾಡುವುದು ಸ್ವಾಭಾವಿಕ/ಆದರೆ ಯಡಿಯೂರಪ್ಪ ನವರು ಸಮರ್ಥವಾಗಿ ಬಜೆಟ್ ಮಂಡಿಸಿದ್ದಾರೆ:ಸಚಿವ ಭೈರತಿ ಬಸವರಾಜ್

ಬೆಳಗಾವಿ : ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಗುರು ಸಿದ್ದರಾಮಯ್ಯ ಅವರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಬೆಳಗಾವಿಯಲ್ಲಿಂದು ತಿರುಗೇಟು ನೀಡಿದ್ದಾರೆ.ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಗೆ ಮುಖ್ಯಮಂತ್ರಿ ಯಡಿಯೂರಪ್ಪ 600 ಕೋಟಿ ರು. ಅನುದಾನ ನೀಡಿದರೂ ಕೂಡ ಯಡಿಯೂರಪ್ಪ ಸರಕಾರ ಹೇಗೆ ದರಿದ್ರ ಸರಕಾರವಾಗುತ್ತದೆ ಎಂದು ಸಚಿವರು ತಿರುಗೇಟು ನೀಡಿದರು.

ಪ್ರವಾಸಿ ಮಂದಿರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾರೆ ಅವರು ವಿರೋಧ ಮಾಡುವುದು ಸ್ವಾಭಾವಿಕ ಆದರೆ ಯಡಿಯೂರಪ್ಪ ನವರು ಸಮರ್ಥವಾಗಿ ಬಜೆಟ್ ಮಂಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಭೀಕರ ಪ್ರವಾಹದ ನಡುವೆ ರಾಜ್ಯದ ಎಲ್ಲ ಜನರ ಹಿತ ಕಾಯುವ ಬಜೆಟ್ ನ್ನು ಸಿಎಂ ಮಂಡಿಸಿದ್ದಾರೆಂದು ಸಮರ್ಥನೆ ನೀಡಿದರು.


Spread the love

About Laxminews 24x7

Check Also

ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Spread the loveಬೆಳಗಾವಿ: ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿನ  ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ