Breaking News

ಸವದತ್ತಿ ಬಳಿಯ ನವಿಲುತೀರ್ಥ ಆಣೆಕಟ್ಟೆಗೆ ಹರಿದುಬರುತ್ತಿದ್ದ ಭಾರೀ ಪ್ರಮಾಣದ ನೀರಿನಲ್ಲಿ ಗುರುವಾರ ಧಿಡೀರ್ ಕುಸಿತ ಎಚ್ಚರಿಕೆಯಿಂದರಲೂ ಮುನ್ಸೂಚನೆ

Spread the love

ಬೆಳಗಾವಿ: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಆಣೆಕಟ್ಟೆಗೆ  ಹರಿದುಬರುತ್ತಿದ್ದ ಭಾರೀ ಪ್ರಮಾಣದ
ನೀರಿನಲ್ಲಿ ಗುರುವಾರ ಧಿಡೀರ್ ಕುಸಿತ ಉಂಟಾಗಿದೆ.

ಖಾನಾಪುರ ಮತ್ತು ಬೈಲಹೊಂಗಲದ ಸುತ್ತಮುತ್ತಲೂ  ಮಳೆಯು ನಿಂತಿದ್ದು, ಬಿಸಿಲಿನ ವಾತಾವರಣ ಉಂಟಾಗಿದ್ದರಿಂದ ಒಳಹರಿವಿನಲ್ಲಿ ಗಮನಾರ್ಹ ಬದಲಾವಣೆಯಾಗಿದೆ.
   ಒಟ್ಟು 37.7 ಟಿ ಎಮ್ ಸಿ  ಸಾಮರ್ಥ್ಯದ ಆಣೆಕಟ್ಟಿನಲ್ಲಿ ಸದ್ಯ 22 ಟಿ ಎಮ್ ಸಿ ನೀರಿನ ಸಂಗ್ರಹವಿದೆ.ಒಟ್ಟು
2079.5 ಅಡಿ ಎತರದ ಆಣೆಕಟ್ಟಿನಲ್ಲಿ ಈಗ 2068 ಅಡಿಯವರೆಗೆ ನೀರು ನಿಂತಿದೆ. ನಿನ್ನೆ ರಾತ್ರಿಯವರೆಗೆ 48 ಸಾವಿರ ಕ್ಯೂಸೆಕ್ಸ ಒಳಹರಿವು ಇದ್ದಿದ್ದು ಇಂದು ಮಧ್ಯಾಹ್ನಕ್ಕೆ 20 ಸಾವಿರಕ್ಕೆ ಕುಸಿದಿದೆ.

 

ನೀರಿನ ಸಂಗ್ರಹವು 24 ಟಿ ಎಮ್ ಸಿ ತಲುಪುವವರೆಗೆ ಆಣೆಕಟ್ಟಿನಿಂದ ನೀರು ಬಿಡುಗಡೆ ಮಾಡದಿರಲು ಅಧಿಕಾರಿಗಳು ನಿರ್ಧಸಿದ್ದಾರೆಂದು ಹೇಳಲಾಗಿದೆ. ಒಳಹರಿವಿನ ಪ್ರಮಾಣ ಕಡಿಮೆ
ಆಗಿರುವದರಿಂದ ಸದ್ಯ ನೀರಿನ ಸಂಗ್ರಹದಲ್ಕಿ ಏರಿಕೆಯಾಗುವದಿಲ್ಲ.

ಆದರೂ ಮಲಪ್ರಭೆ  ನದಿ ತೀರದ ಊರು, ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕೆಂದು ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಯ ಅಧಿಕಾರಿಗಳು ಈಗಾಗಲೇ ಮುನ್ಸೂಚನೆ ನೀಡುತ್ತಿದ್ದಾರೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ