Breaking News

ಸಿಎಂ ನಿವಾಸ ಕಾವೇರಿಯ 9 ಮಂದಿಗೆ ಕೊರೊನಾ: ಕುಟುಂಬಸ್ಥರಿಗೆ ಪರೀಕ್ಷೆ

Spread the love

ಸಿಎಂ ನಿವಾಸ ಕಾವೇರಿಯಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ 8 ಮಂದಿಗೆ ಕೊರೊನಾದ ರೋಗ ಲಕ್ಷಣ ಕಂಡು ಬಂದಿಲ್ಲ. ಆದ್ರೆ ಕೊರೊನಾ ಇರುವುದು ದೃಢಪಟ್ಟಿದ್ದು,ಚಿಕಿತ್ಸೆ ನಡೆಯುತ್ತಿದೆ.

ಈ ಮಧ್ಯೆ ಸಿಎಂ ಸಂಪರ್ಕಕ್ಕೆ ಬಂದಿದ್ದ ಜನರಿಗೆ ಸೆಲ್ಫ್ ಕ್ವಾರಂಟೈನ್ ಆಗುವಂತೆ ಹೇಳಲಾಗಿದೆ.ಸಿಎಂ ಕುಟುಂಬದ ಎಲ್ಲ ಸದಸ್ಯರಿಗೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕುಟುಂಬ ಸದಸ್ಯರಿಗೆ ಬಿಬಿಎಂಪಿ ಆಂಟಿಜೆನ್ ಟೆಸ್ಟ್ ಮಾಡ್ತಿದೆ.

 

ಸಿಎಂ ನಿವಾಸದ ಸಿಬ್ಬಂದಿಗೂ ಕೊರೊನಾ ಪರೀಕ್ಷೆ ಮಾಡಲಾಗ್ತಿದೆ. ಗೃಹ ಕಚೇರಿ ಕೃಷ್ಣಾ ಸಿಬ್ಬಂದಿಗೂ ಪರೀಕ್ಷೆಗೆ ಸೂಚಿಸಲಾಗಿದೆ. ನೆಗೆಟಿವ್ ಬಂದಲ್ಲಿ ಹೋಂ ಕ್ವಾರಂಟೈನ್ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಬಂದಿದ್ದು ಹೇಗೆ ಎಂಬ ಪ್ರಶ್ನೆ ಸದ್ಯ ಮೂಡಿದ್ದು,ಇದ್ರ ಪರಿಶೀಲನೆ ಶುರುವಾಗಿದೆ.


Spread the love

About Laxminews 24x7

Check Also

ಪತಿಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್‌

Spread the loveಬೆಂಗಳೂರು: ಪತಿಗಿಂತ  ಹೆಚ್ಚು ದುಡಿಯುವ ಪತ್ನಿಗೆ  ಜೀವನಾಂಶ ನೀಡಬೇಕಿಲ್ಲ ಎಂದು ನ್ಯಾ. ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ