Breaking News

ಮಗನನ್ನೇ ಹತ್ಯೆಗೈದ ಮಲತಂದೆ, ರೂಮ್ ಲಾಕ್ ಮಾಡಿ ಎಸ್ಕೇಪ್: ಮೃತದೇಹದೊಂದಿಗೆ ಮೂರು ದಿನ ಕಳೆದ ತಾಯಿ

Spread the love

ಮಗನನ್ನೇ ಹತ್ಯೆಗೈದ ಮಲತಂದೆ: ರೂಮ್ ಲಾಕ್ ಮಾಡಿ ಎಸ್ಕೇಪ್: ಮೃತದೇಹದೊಂದಿಗೆ ಮೂರು ದಿನ ಕಳೆದ ತಾಯಿ

ಮಲತಂದೆಯೊಬ್ಬ ತನ್ನ ಮಗನನ್ನೇ ಹತ್ಯೆಗೈದು, ಗಾಯಗೊಂಡಿದ್ದ ಪತ್ನಿಯನ್ನು ಮನೆಯ ರೂಮ್ ನಲ್ಲಿಯೇ ಲಾಕ್ ಮಾಡಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮಗನ ಶವದ ಮುಂದೆಯೇ ತಾಯಿ ಮೂರು ದಿನಗಳ ಕಾಲ ನರಳಾಡಿದ್ದಾರೆ. ಸುದೀಪ್‌ ಮಗನನ್ನೇ ಕೊಲೆಗೈದ ಮಲತಂದೆ. ಸೋಹಮ್ ಮಲತಂದೆಯಿಂದ ಕೊಲೆಯಾದ ಮಗ.

ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿರುವ ಎಸ್.ಎಸ್.ಆರ್.ಕೆ ತುಳಸಿ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಸುದೀಪ್, ತನ್ನ ಪತ್ನಿ ಸೀಮಾ ದಾಸ್ ಮತ್ತು ಆಕೆಯ ಮಗ ಸೋಹಮ್ ಜೊತೆ ಕಳೆದ ಎರಡು ವರ್ಷಗಳಿಂದ ಇಲ್ಲಿ ಬಾಡಿಗೆಗೆ ವಾಸವಿದ್ದ.

ಕಳೆದ ಆರು ತಿಂಗಳಿನಿಂದ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ, ನವೆಂಬರ್ 16ರ ರಾತ್ರಿ ಮನೆಯಲ್ಲಿ ಮತ್ತೆ ಜೋರಾಗಿ ಜಗಳ ಶುರುವಾಗಿದೆ. ಸ್ವಲ್ಪ ಹೊತ್ತಿನ ನಂತರ ಗಲಾಟೆ ತಣ್ಣಗಾಗಿದ್ದರಿಂದ, ಮಾಮೂಲಿ ಜಗಳವಿರಬೇಕು ಅಂತ ನೆರೆಹೊರೆಯವರು ಮತ್ತು ಮಾಲೀಕರು ಸುಮ್ಮನಾಗಿದ್ದರು. ಆದರೆ ಆ ರಾತ್ರಿ ಸುದೀಪ್ ಪತ್ನಿ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಸುತ್ತಿಗೆಯಿಂದ ಹೊಡೆದು, ಚಾಕುವಿನಿಂದ ಇರಿದು ಮಗ ಸೋಹಮ್‌ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಗಾಯಗೊಂಡಿದ್ದ ಪತ್ನಿ ಸೀಮಾಳನ್ನು ರೂಂನಲ್ಲಿ ಕೂಡಿ ಹಾಕಿ, ಮನೆಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾನೆ.

ಮೂರು ದಿನಗಳಾದರೂ ಸೀಮಾ ಆಗಲಿ, ಮಗನಾಗಲಿ ಮನೆಯಿಂದ ಹೊರಗೆ ಬಾರದಿದ್ದನ್ನು ಕಂಡು ಅನುಮಾನಗೊಂಡ ಪಕ್ಕದ ಮನೆಯವರು, ನಿನ್ನೆ ಮಾಲೀಕ ಮಲ್ಲಯ್ಯ ಅವರಿಗೆ ವಿಷಯ ತಿಳಿಸಿದ್ದಾರೆ. ಮಾಲೀಕರು ಬಂದು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಕೀ ಮೇಕರ್ ಕರೆಸಿ ಬೀಗ ತೆಗೆಸಿದಾಗ, ರೂಂ ಒಳಗಿನಿಂದ ಸೀಮಾ ದಾಸ್ ಕೂಗುತ್ತಿದ್ದ ಶಬ್ದ ಕೇಳಿಸಿದೆ. ತಕ್ಷಣ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಹಾಲ್‌ನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಬಾತ್‌ರೂಂನಲ್ಲಿ ಮಗ ಸೋಹಮ್ ಮೃತದೇಹ ಪತ್ತೆಯಾಗಿದೆ. ಮೂರು ದಿನಗಳಿಂದ ಅನ್ನ-ನೀರಿಲ್ಲದೆ, ಕಣ್ಣಮುಂದೆಯೇ ಮಗನ ಶವ ನೋಡುತ್ತಾ ತಾಯಿ ನರಳಾಡಿದ್ದಾರೆ.

ಸದ್ಯ ಅಪಾರ್ಟ್‌ಮೆಂಟ್ ಮಾಲೀಕ ಮಲ್ಲಯ್ಯ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿದ್ದ ಹಂತಕನನ್ನು ಪತ್ತೆ ಮಾಡಿದ್ದಾರೆ. ಮಲತಂದೆ ಸುದೀಪ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಮಗನನ್ನೇ ಹತ್ಯೆಗೈದ ಮಲತಂದೆ, ರೂಮ್ ಲಾಕ್ ಮಾಡಿ ಎಸ್ಕೇಪ್: ಮೃತದೇಹದೊಂದಿಗೆ ಮೂರು ದಿನ ಕಳೆದ ತಾಯಿ

Spread the loveಮಗನನ್ನೇ ಹತ್ಯೆಗೈದ ಮಲತಂದೆ: ರೂಮ್ ಲಾಕ್ ಮಾಡಿ ಎಸ್ಕೇಪ್: ಮೃತದೇಹದೊಂದಿಗೆ ಮೂರು ದಿನ ಕಳೆದ ತಾಯಿ ಮಲತಂದೆಯೊಬ್ಬ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ