Breaking News

ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಸಮಸ್ಯೆ ಬಗೆಹರಿಸುತ್ತೇವೆ – ಆಶಾ ಕಾರ್ಯಕರ್ತೆಯರಿಗೆ ಸಿಎಂ ಭರವಸೆ

Spread the love

ಬೆಂಗಳೂರು: ಹಿರಿಯ ಅಧಿಕಾರಿಗಳು, ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಆರ್ಥಿಕ ಪರಿಸ್ಥಿತಿಯನ್ನೂ ನೋಡಿಕೊಂಡು ಸಮಸ್ಯೆ ಬಗೆಹರಿಸುತ್ತೇನೆ ಎಂದು ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆ ಶಿವಕುಮಾರ್‌  ಭರವಸೆ ನೀಡಿದ್ದಾರೆ.

ಸಿಎಂ ಡಿಕೆಶಿ ಅಧಿಕೃತ ಸರ್ಕಾರಿ ನಿವಾಸ ಗಂಗಾದಲ್ಲಿ ಮಧ್ಯಾಹ್ನ ಭೋಜನ ಕೂಟದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಪೂರ್ಣ ಭರವಸೆ ನೀಡದೇ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಆಶಾ ಕಾರ್ಯಕರ್ತರನ್ನ  ಕರೆದು ಸಮಾಲೋಚನೆ ನಡೆಸಿದೆ, ಅವರ ಪ್ರತಿನಿಧಿಗಳು ಬಂದಿದ್ದರು. ರಾಜ್ಯದಲ್ಲಿ ಸುಮಾರು 41,000 ಜನ ಆಶಾ ಕಾರ್ಯಕರ್ತರಿದ್ದಾರೆ. ದಿ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಕಾಲದಲ್ಲಿ ಈ ಯೋಜನೆ ಆರಂಭ ಆಯ್ತು. ಆರಂಭದಲ್ಲಿ 200 ರೂ. ಕೊಡ್ತಿದ್ರು. ಪ್ರಸ್ತುತ ರಾಜ್ಯ ಸರ್ಕಾರ 5,000 ರೂ. ಕೊಡುತ್ತಿದ್ದು, ಕೇಂದ್ರ ಸರ್ಕಾರ 2,000 ರೂ. ಕೊಡುತ್ತಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಕೇಂದ್ರ ಸರ್ಕಾರ ಎಷ್ಟು ಕೊಡುತ್ತಿದ್ದೆಯೋ ನಾವು ಅಷ್ಟೇ ಕೊಡಬೇಕು ಅಂತಾ ಒಂದು ಒಪ್ಪಂದ ಮಾಡಿಕೊಂಡ್ವಿ. ಆದ್ರೆ ಕೇಂದ್ರ ಸರ್ಕಾರ ಹೆಚ್ಚಿಗೆ ಮಾಡಲೇ ಇಲ್ಲ. ನಾವು 5,000 ಜೊತೆಗೆ 1,000 ರೂ. ಇನ್ಸೆಂಟಿವ್‌ ಕೊಡ್ತಿದ್ದೇವೆ. ಒಟ್ಟಾರೆಯಾಗಿ 8,000 ರೂ. ಅವರಿಗೆ ಬರ್ತಿದೆ. ಈಗ 15,000 ರೂ.ಗೆ ಬೇಡಿಕೆಯಿಟ್ಟಿದ್ದಾರೆ. ನಾನು ವಾಸ್ತವಾಂಶ ತಿಳಿಸಿದ್ದೇನೆ. ನಿಮ್ಮದಷ್ಟೇ ಅಲ್ಲ, ಬೇರೆಯವರದ್ದೂ ಇದೆ, ಅಂತಾ ಹೇಳಿದ್ದೇನೆ. ವಿಧಾನಸಭಾ ಅಧಿವೇಶನದ ಹೊತ್ತಿಗೆ ಸಮಾಲೋಚನೆ ನಡೆಸಿ, ಆರ್ಥಿಕ ಪರಿಸ್ಥಿತಿ ನೋಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ಮೇಲೆ ವಿಶ್ವಾಸ ಇಡಿ, ಪ್ರತಿಭಟನೆ ವಾಪಸ್‌ ತಗೊಳ್ಳಿ ಅಂತಾ ಮನವಿ ಮಾಡಿದ್ದೇನೆ. ಅವರಿಗೆ ನಮ್ಮ ಸರ್ಕಾರದ ಬಗ್ಗೆ ಸಹಾನುಭೂತಿ ಇದೆ, ಕಷ್ಟಪಟ್ಟು ದುಡಿಯುತ್ತಿದ್ದಾರೆ. ದಯವಿಟ್ಟು ಪ್ರತಿಭಟನೆ ವಾಪಸ್‌ ಪಡೆಯಿರಿ ಅಂದಿದ್ದೇನೆ. ಪ್ರತಿಭಟನೆ ಬಿಟ್ಟು ವಾಪಸ್‌ ನಿಮ್ಮ ಮನೆಗಳಿಗೆ ಹೋಗಿ, ನಾವು ಎಲ್ಲಾ ಚರ್ಚೆ ಮಾಡಿ ತೀರ್ಮಾನ ಸಹಾಯ ಮಾಡ್ತೀವಿ ಎಂದಿದ್ದಾರಲ್ಲದೇ, ಅವರು ಇನ್ನಷ್ಟು ಬೇಡಿಕೆ ಇಟ್ಟಿದ್ದಾರೆ, ಬೇಡ ಅಂತಾ ಹೇಳಲ್ಲ. ನಮ್ಮ ಗೃಹಸಚಿವರು ಅದರ ಬಗ್ಗೆ ಮಾತಾಡ್ತಾರೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಗೋಕಾಕ:ಪಂಚಾಯತ್ ಪಿಡಿಒ ಮತ್ತು ಕಾರ್ಯದರ್ಶಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ : ಶಾಸಕ ರಮೇಶ ಜಾರಕಿಹೊಳಿ

Spread the love ಗೋಕಾಕ : ಪಂಚಾಯತ್ ಪಿಡಿಒ ಮತ್ತು ಕಾರ್ಯದರ್ಶಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ರಮೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ