Breaking News

ಭಾರತೀಯರಿಗೆ ಇನ್ಮುಂದೆ ಮಲೇಷ್ಯಾಗೆ ವೀಸಾ ಕಡ್ಡಾಯ – 2027ರ ಜ.1ರಿಂದ ವೀಸಾ ರಹಿತ ಪ್ರವೇಶ ರದ್ದು

Spread the love

ನವದೆಹಲಿ: ಭಾರತೀಯ ಪ್ರಜೆಗಳಿಗೆ ನೀಡಲಾಗುತ್ತಿದ್ದ 30 ದಿನಗಳ ವೀಸಾ ರಹಿತ ಪ್ರವೇಶವನ್ನು ಮಲೇಷ್ಯಾ  ಇದೀಗ ಹಿಂಪಡೆದಿದ್ದು, 2027ರ ಜನವರಿ 1ರಿಂದ ವೀಸಾ ಕಡ್ಡಾಯಗೊಳಿಸಿದೆ.

ಈ ಬಗ್ಗೆ ಮಲೇಷ್ಯಾ ವಲಸೆ ಇಲಾಖೆ  ಪ್ರಕಟಣೆ ಹೊರಡಿಸಿದ್ದು, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ನೀಡಲಾಗುತ್ತಿದ್ದ ವೀಸಾ ವಿನಾಯಿತಿ ಸೌಲಭ್ಯವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಹೊಸ ವರ್ಷದಿಂದ ದೇಶಕ್ಕೆ ಪ್ರವೇಶಿಸುವ ಭಾರತೀಯರು ಆಗಮನಕ್ಕೆ ಮುನ್ನವೇ ಮಾನ್ಯ ವೀಸಾ ಹೊಂದಿರಬೇಕು. ಈ ಸಂಬಂಧ ಡಿಸೆಂಬರ್ 1ರಿಂದ MyVISA ಪೋರ್ಟಲ್‌ನಲ್ಲಿ ವೀಸಾ ಪಡೆಯಲು ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ತಿಳಿಸಿದೆ.

ಉದ್ಯೋಗ ಹುಡುಕಿಕೊಂಡು ಮಲೇಷ್ಯಾಕ್ಕೆ ಪ್ರಯಾಣಿಸಲು ವೀಸಾ ಮುಕ್ತ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಸಿ ಕೌಲಾಲಂಪುರದಲ್ಲಿರುವ ಭಾರತದ ಹೈಕಮಿಷನ್ ಸಲಹೆ ನೀಡಿದ ಎರಡು ತಿಂಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಯಾಕೆ ಈ ನಿರ್ಧಾರ?
ಸೆಪ್ಟೆಂಬರ್ 22ರಂದು ಕೌಲಾಲಂಪುರದಲ್ಲಿರುವ ಭಾರತದ ಹೈಕಮಿಷನ್ ಮಲೇಷ್ಯಾಕ್ಕೆ ಪ್ರಯಾಣಿಸುವ ಭಾರತೀಯ ಪ್ರಜೆಗಳಿಗಾಗಿ ಪ್ರತ್ಯೇಕ ಸೂಚನೆಯನ್ನು ಹೊರಡಿಸಿತ್ತು. 30 ದಿನಗಳ ವೀಸಾ ಮುಕ್ತ ಸೌಲಭ್ಯವನ್ನು ಬಳಸಿಕೊಂಡು ಉದ್ಯೋಗ ಹುಡುಕಲು ದೇಶಕ್ಕೆ ಬರುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗುತ್ತಿದೆ. ಹೀಗಾಗಿ ವೀಸಾ ಮುಕ್ತ ಸೌಲಭ್ಯ ಬಳಸಿಕೊಂಡು ಮಲೇಷ್ಯಾದಲ್ಲಿ ಉದ್ಯೋಗ ಪಡೆದುಕೊಳ್ಳದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿತ್ತು.

ಇನ್ನೂ ಕೆಲ ಏಜೆಂಟರ ಸುಳ್ಳು ಉದ್ಯೋಗ ಭರವಸೆಗಳಿಂದ ಕೆಲವು ಭಾರತೀಯ ಪ್ರಜೆಗಳು ದಾರಿ ತಪ್ಪುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿತ್ತು. ವೀಸಾ ಮುಕ್ತ ಸೌಲಭ್ಯವು ಕೇವಲ ಪ್ರವಾಸೋದ್ಯಮ ಮತ್ತು ಸಾಮಾಜಿಕ ಭೇಟಿಗಳಿಗೆ ಮಾತ್ರವೇ ಹೊರತು ಉದ್ಯೋಗಕ್ಕಲ್ಲ ಎಂದು ಸಲಹೆ ಮೂಲಕ ಸ್ಪಷ್ಟಪಡಿಸಿತ್ತು.


Spread the love

About Laxminews 24x7

Check Also

ಗೋಕಾಕ:ಪಂಚಾಯತ್ ಪಿಡಿಒ ಮತ್ತು ಕಾರ್ಯದರ್ಶಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ : ಶಾಸಕ ರಮೇಶ ಜಾರಕಿಹೊಳಿ

Spread the love ಗೋಕಾಕ : ಪಂಚಾಯತ್ ಪಿಡಿಒ ಮತ್ತು ಕಾರ್ಯದರ್ಶಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ರಮೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ