Breaking News

ಚೆನ್ನೈ | 700 ಕೋಟಿ ಮೌಲ್ಯದ 70 ಕೆಜಿ ಹೆರಾಯಿನ್‌ ಸೀಜ್‌ – ಇಬ್ಬರು ಅರೆಸ್ಟ್

Spread the love

ಚೆನ್ನೈ: ಡಿಆರ್‌ಐ ಅಧಿಕಾರಿಗಳು  ಚೆನ್ನೈನ ಅತಿ ದೊಡ್ಡ ಮಾದಕ ವಸ್ತು ಸ್ಮಗ್ಲಿಂಗ್ ಜಾಲವನ್ನು ಬಯಲಿಗೆಳೆದಿದ್ದು, 700 ಕೋಟಿ ರೂ. ಮೌಲ್ಯದ 70 ಕೆಜಿ ಹೆರಾಯಿನ್ ಅನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ ಅಧಿಕಾರಿಗಳು, ದಕ್ಷಿಣ ತಮಿಳುನಾಡು ಮೂಲದ ಅಬ್ದುಲ್ ಶುಕ್ಕೂರ್ ಹಾಗೂ ಶಫೀಕ್ ಅಹಮದ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.

ನ.17ರಂದು ಡಿಆರ್‌ಐ ಆಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಮಾಧವರಂನ ಐಸ್ ಕಾರ್ಖಾನೆಯ ಬಳಿ ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ಖಾನೆಯ ಬಳಿ ಐಸ್ ತುಂಬಿಸಲು ನಿಲ್ಲಿಸಿದ್ದಾಗ ವಾಹನವ್ನು ತಡೆದು ಮೊಬೈಲ್ ಐಸ್ ಕ್ರೀಮ್ ವ್ಯಾನ್‌ನೊಳಗೆ ಪರಿಶೀಲನೆ ನಡೆಸಿದ್ದಾರೆ.

ಆಗ ಫ್ರೀಜರ್‌ನಲ್ಲಿ ಬಚ್ಚಿಡಲಾಗಿದ್ದ 70 ಕೆಜಿ ಹೆರಾಯಿನ್‌ನ ಬಂಡಲ್‌ಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಸದ್ಯ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ನ.18ರಂದು ಆಲಂದೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ


Spread the love

About Laxminews 24x7

Check Also

ಗೋಕಾಕ:ಪಂಚಾಯತ್ ಪಿಡಿಒ ಮತ್ತು ಕಾರ್ಯದರ್ಶಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ : ಶಾಸಕ ರಮೇಶ ಜಾರಕಿಹೊಳಿ

Spread the love ಗೋಕಾಕ : ಪಂಚಾಯತ್ ಪಿಡಿಒ ಮತ್ತು ಕಾರ್ಯದರ್ಶಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ರಮೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ