Breaking News

ಶಿವಶಂಕರಪ್ಪ, ಗ್ಯಾನೇಂದ್ರ ಜೊತೆ ಹಣಕಾಸಿನ ವ್ಯವಹಾರ ಆರೋಪ – ಕೆಪಿಎಸ್‌ಸಿ ಸದಸ್ಯೆ ಗೀತಾ ಅರೆಸ್ಟ್

Spread the love

ಬೆಂಗಳೂರು: ಕೆಪಿಎಸ್‌ಸಿ  ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಮತ್ತೊಂದು ಬಂಧನವಾಗಿದೆ. ಶಿವಶಂಕರಪ್ಪ, ಗ್ಯಾನೇಂದ್ರ, ಕನ್ನಾಳೆ ಬಳಿಕ ಕೆಪಿಎಸ್‌ಸಿ ಸದಸ್ಯೆ ಬಿ.ವಿ ಗೀತಾರನ್ನು ಎಸ್‌ಐಟಿ ಬಂಧಿಸಿದೆ.

ಇಡಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿದ್ದ ಗೀತಾ, ಇವತ್ತು ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ಗೀತಾರನ್ನು ಎಸ್‌ಐಟಿ ಬಂಧಿಸಿದೆ. ಶಿವಶಂಕರಪ್ಪ ಸಾಹುಕಾರ್ ಹಾಗೂ ಗ್ಯಾನೇಂದ್ರ ಜೊತೆ ಗೀತಾ ಅಕ್ರಮದಲ್ಲಿ ಭಾಗಿಯಾಗಿದ್ದು, ಹಣಕಾಸಿನ ವ್ಯವಹಾರವನ್ನೂ ನಡೆಸಿದ್ದಾರೆ. ಈ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣೆಗೆ ಅಸಹಕಾರ ಹಿನ್ನೆಲೆಯಲ್ಲಿ ಗೀತಾರನ್ನು ಬಂಧಿಸಲಾಗಿದ್ದು, 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಎಸ್‌ಐಟಿ ಪಡೆದುಕೊಂಡಿದೆ.

ಈ ಮಧ್ಯೆ, ಗ್ರಾಮೀಣಾಭಿವೃದ್ಧಿ ಎಇಇ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆನ್ನು ಬಿದ್ದಿದೆ. ಆರ್‌ಡಿಪಿಆರ್‌ನ ಎಇಇ ಪರೀಕ್ಷೆಯ ಬಗ್ಗೆ ಶಿವಶಂಕರಪ್ಪ ಸಾಹುಕಾರ್, ಗ್ಯಾನೇಂದ್ರ, ಗೀತಾ ವಿಚಾರಣೆಗೆ ಒಳಪಡಿಸಿರುವ ಇಡಿ, ಸಚಿವ ಪ್ರಿಯಾಂಕ್ ಖರ್ಗೆ ಮೇಲಿರುವ ಆರೋಪ ಕೆದಕಿದೆ.

ಆರ್‌ಡಿಪಿಆರ್ ಪರೀಕ್ಷೆಯಲ್ಲಿ ಓಎಂಆರ್ ತಿದ್ದುಪಡಿ ಅಕ್ರಮದ ಬಗ್ಗೆ ಉತ್ತರಿಸಲು ಸೂಚಿಸಿದ್ದು, ಮೂವರೂ ಹಾರಿಕೆಯ ಉತ್ತರ ಕೊಟ್ಟಿದ್ದಾರೆ ಅಂತ ಎನ್ನಲಾಗಿದೆ. ಅಕ್ರಮ ಆಗಿದೆ ಅನ್ನೋದು ಅಷ್ಟೇ ಗೊತ್ತು. ಕೆಪಿಎಸ್‌ಸಿ ಸದಸ್ಯ ಮುಸ್ತಾಫ ಅವರ ಆಯೋಗ ತನಿಖೆ ಮಾಡಿದೆ ಅಂದಿದ್ದಾರೆ.

ಈ ಮಧ್ಯೆ, ವಾಲ್ಮೀಕಿ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ವಿಚಾರವಾಗಿ ದೋಷಾರೋಪ ಬಗ್ಗೆ ಸ್ಪಷನೆ ನೀಡುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ನಾಗೇಂದ್ರ ವಿರುದ್ಧ ದಾಖಲಾಗಿರುವ ಮೂರು ದೋಷಾರೋಪ ಪಟ್ಟಿ ಸಂಬಂಧ ವಿವರಣೆ ನೀಡುವಂತೆ ಸಿಬಿಐ ಕೇಳಿದೆ.


Spread the love

About Laxminews 24x7

Check Also

ತಡವಾಗಿ ಹೋಗಿದ್ದೇ ಹಿಂದಿನ ಸಾಲಲ್ಲಿ ಕೂರಲು ಕಾರಣ: ಸಿದ್ದರಾಮಯ್ಯ ಸ್ಪಷ್ಟನೆ

Spread the loveಬೆಂಗಳೂರು: ದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿಯವರ  ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ