Breaking News
Electricity Pylons at sunset on background

ಬೆಳಗಾವಿಯಲ್ಲಿ ನ.19ರಂದು ವಿದ್ಯುತ್ ವ್ಯತ್ಯಯ: ಹಲವು ಗ್ರಾಮ, ಬಡಾವಣೆಗಳಿಗೆ ಕರೆಂಟ್ ಇರಲ್ಲ

Spread the love

ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ತ್ರೈಮಾಸಿಕ ನಿರ್ವಹಣೆ ಹಾಗೂ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಬೆಳಗಾವಿ ನಗರದ ಹಲವು ಬಡಾವಣೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಗ್ರಾಮೀಣ ಪ್ರದೇಶಗಳು

110 ಕೆ.ವಿ. ವಡಗಾಂವ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಧಾಮನೆ, ಕುರುಬರಹಟ್ಟಿ, ಮಾಸ್ಥಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ ಹಾಗೂ ಬಸ್ತವಾಡ ಗ್ರಾಮಗಳಲ್ಲಿ ಮತ್ತು ಈ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನಗರ ಪ್ರದೇಶಗಳು

ವಡಗಾಂವ ಉಪಕೇಂದ್ರದ ವಿವಿಧ ವಿದ್ಯುತ್ ವಿತರಣಾ ಮಾರ್ಗಗಳ ನಿರ್ವಹಣಾ ಕಾಮಗಾರಿಯಿಂದ ಮಾಧವ ರಸ್ತೆ, ಕಪಿಲೇಶ್ವರ ಕಾಲೋನಿ, ಮಹಾವೀರ ಕಾಲೋನಿ, ಸಮರ್ಥನಗರ, ಓಂ ನಗರ, ಖಾಸಬಾಗ, ಹೊಸೂರ, ಸುಭಾಷ್ ಮಾರ್ಕೆಟ್, ಬಜಾರ್ ಗಲ್ಲಿ, ವಿದ್ಯಾನಗರ, ಭಾಗ್ಯನಗರ, ಯಳ್ಳೂರ ರಸ್ತೆ, ಅನಗೋಳ, ಆನಂದವಾಡಿ, ಸಂಭಾಜಿ ನಗರ, ಕೇಶವ ನಗರ, ನೇಕಾರ ಕಾಲೋನಿ, ಮಂಗಾಯಿ ನಗರ, ಕಲ್ಯಾಣ ನಗರ, ಮಲಪ್ರಭಾ ನಗರ, ಸರ್ವೋದಯ ಕಾಲೋನಿ, ಆರ್‌ಪಿಡಿ ರಸ್ತೆ, ಆರ್‌ಕೆ ಮಾರ್ಗ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ನಿರ್ವಹಣಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಧರ್ಮದ ಆಧಾರದ ಮೇಲೆ ಯಾವುದೇ ದಾಖಲೆಗಳಿಲ್ಲ – ಹಿಂದೂಗಳು ನಾಪತ್ತೆ ಎಂಬ ಯೋಗಿ ಹೇಳಿಕೆಗೆ ಯುಪಿ ಸಿಇಒ ಕೌಂಟರ್‌

Spread the loveಲಕ್ನೋ: ರಾಜ್ಯ ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರನ್ನ (Hindu Voters) ಹೊರಗಿಡಲಾಗಿದೆ ಎಂಬ ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ