ಬೆಂಗಳೂರು: ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುವ ಯುವತಿಯೊಬ್ಬಳಿಗೆ ಆಕೆಯ ಪ್ರಿಯಕರ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಂತ್ರಸ್ತೆ ಕನ್ನಡ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದಾಳೆ. ಸಂತ್ರಸ್ತೆ ಶರತ್ ಕುಮಾರ್ ಎಂಬುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಆತನಿಗೆ 2 ಲಕ್ಷ ಹಣ ಕೂಡ ನೀಡಿದ್ದಳು. ನಂತರ ಇಬ್ಬರೂ ಬ್ರೇಕ್ಅಪ್ ಮಾಡಿಕೊಂಡು ಬೇರೆಯಾಗಿದ್ದರು. ಇದಾದ ನಂತರ ಸಂತ್ರಸ್ತೆಯೊಂದಿಗೆ ಆತ ಸಂಪರ್ಕ ಕಡಿದುಕೊಂಡಿದ್ದ.
ಕಳೆದ ನ. 4ರಂದು ಮತ್ತೇ ಶರತ್ ಆಕೆಯ ಕಣ್ಣಿಗೆ ಬಿದ್ದಿದ್ದ. ಆಗ ಕೊಟ್ಟ ಹಣವನ್ನು ವಾಪಸ್ ನೀಡುವಂತೆ ಯುವತಿ ಕೇಳಿದ್ದಾಳೆ. ಆದರೆ, ಶರತ್ ಆಕೆಯನ್ನ ಅಶ್ಲೀಲವಾಗಿ ನಿಂದಿಸಿದ್ದಲ್ಲದೆ ಬೆದರಿಕೆ ಹಾಕಿದ್ದಾನೆ. ಯುವತಿಯ ಕಾರಿನ ಗ್ಲಾಸ್ ಒಡೆದು ಹಲ್ಲೆ ಮಾಡಿದ್ದಾನೆ. ಯುವತಿಯ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಘಟನೆ ಸಂಬಂಧ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ.
Laxmi News 24×7