Breaking News

ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ – ಯುವಕನಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ

Spread the love

ತುಮಕೂರು: ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ  ಮಾಡುತ್ತಿದ್ದ ಯುವಕನನ್ನು ಹಿಡಿದು ಸಾರ್ವಜನಿಕರು ಗೂಸಾ ಕೊಟ್ಟಿರುವ ಘಟನೆ ತುಮಕೂರು ನಗರದ ಶಿವಕುಮಾರ ಸ್ವಾಮಿಜಿ ವೃತ್ತದಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ಸನ್ನಿ ಎಂಬ ಯುವಕ ಕಾಲಿಗೆ ವಾಕಿಂಗ್ ಸ್ಟಿಕ್ ಹಾಕಿಕೊಂಡು ವಿಶೇಷಚೇತನನಂತೆ ನಟಿಸಿ, ಕೈಕಾಲು ನಡಗಿಸುತ್ತಾ, ಕುತ್ತಿಗೆ ಅಲ್ಲಾಡಿಸುತ್ತಾ ಭಿಕ್ಷೆ ಬೇಡುತಿದ್ದ. ಈ ನಕಲಿ ಭಿಕ್ಷುಕರ ಜಾಲ ಪತ್ತೆಹಚ್ಚಿದ ಭಗತ್ ಕ್ರಾಂತಿ ಸೇನೆ ಕಾರ್ಯಕರ್ತರು ಯುವಕನ ಬಳಿಯಿದ್ದ ವಾಕಿಂಗ್ ಸ್ಟಿಕ್ ತೆಗೆದಾಗ ಯಾವುದೇ ಅಂಗವೈಕಲ್ಯ ಇಲ್ಲದಿರುವುದು ಸಾಬೀತಾಗಿದೆ. ನಕಲಿ ಭಿಕ್ಷುಕನನ್ನು ಹಿಡಿಯುತಿದ್ದಂತೆ ಸಾರ್ವಜನಿಕರು ಯವಕನಿಗೆ ಧರ್ಮದೇಟು ನೀಡಿದ್ದಾರೆ.

ಭಿಕ್ಷಾಟನೆ ಮಾಡುತ್ತಿದ್ದ ಯುವಕನ ಜೋಳಿಗೆಯಲ್ಲಿ ಸಾವಿರಾರು ರೂಪಾಯಿ ಪತ್ತೆಯಾಗಿದೆ. 10, 20 ರೂ. ನೋಟುಗಳು ಪತ್ತೆಯಾಗಿದೆ. ಈ ನಕಲಿ ಭಿಕ್ಷುಕ ದಿನಕ್ಕೆ 5-10 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದ. ಸದ್ಯ ಭಗತ್ ಕ್ರಾಂತಿ ಸೇನೆ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದೆ. ಜೋಳಿಗೆಯಲ್ಲಿ ಇದ್ದ ಹಣವನ್ನು ಸಾರ್ವಜನಿಕರು ಸಿದ್ದಗಂಗಾ ಮಠದ ಅನ್ನದಾಸೋಹಕ್ಕೆ ತಲುಪಿಸಿದ್ದಾರೆ. ಈ ಯುವಕನ ಹಿಂದೆ ದೊಡ್ಡದೊಂದು ಜಾಲ ಇರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತವಾಗಿದೆ.


Spread the love

About Laxminews 24x7

Check Also

ಪ್ರೀತಿಸಿ ಮದುವೆಯಾದ ನವವಿವಾಹಿತೆ ಆತ್ಮಹತ್ಯೆ – ವರದಕ್ಷಿಣೆ ಕಿರುಕುಳ ಆರೋಪ

Spread the loveಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಮದುವೆಯಾಗಿ ವರ್ಷ ಕಳೆಯುವ ಮುನ್ನವೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ