Breaking News

ಡಾ.ರಾಜ್ ಸಂಬಂಧಿ ಮನೆಯಲ್ಲಿ ಸ್ಪೋಟ ಕೇಸ್ – ಕಚ್ಚಾ ಬಾಂಬ್ ಅಲ್ಲ, ಪಟಾಕಿ ಸ್ಪೋಟ: ತಮಿಳುನಾಡು ಪೊಲೀಸರ ಸ್ಪಷ್ಟನೆ

Spread the love

ಚಾಮರಾಜನಗರ: ತಮಿಳುನಾಡಿನ  ದೊಡ್ಡ ಗಾಜನೂರಿನಲ್ಲಿರುವ ವರನಟ ಡಾ.ರಾಜ್‌ಕುಮಾರ್ ಅವರ ದೂರದ ಸಂಬಂಧಿಯ ಮನೆ ಮುಂದೆ ಸಂಭವಿಸಿದ ಸ್ಫೋಟ ಕೇಸ್‌ಗೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಸ್ಪಷ್ಟನೆ ನೀಡಿದ್ದು, ಬ್ಲಾಸ್ಟ್ ಆಗಿದ್ದು ಕಚ್ಚಾ ಬಾಂಬ್ ಅಲ್ಲ, ಪಟಾಕಿ ಎಂದು ತಿಳಿಸಿದ್ದಾರೆ.

ಚಾಮರಾಜನಗರ ಗಡಿಭಾಗ ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿ ಏಕಾಏಕಿ ಭಾರೀ ಶಬ್ದದೊಂದಿಗೆ ಸ್ಫೋಟವೊಂದು ಸಂಭವಿಸಿತ್ತು. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ತಾಳವಾಡಿ ಪೊಲೀಸರು ಸ್ಥಳದಲ್ಲಿದ್ದ ಅವಶೇಷಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ಸ್ಪಷ್ಟನೆ ನೀಡಿದ ಪೊಲೀಸರು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಇದು ಕಚ್ಚಾ ಬಾಂಬ್ ಸ್ಫೋಟ ಅಲ್ಲ. ಕೆಲ ಯುವಕರು ನಿಗದಿತ ಸಮಯಕ್ಕಿಂತ ಹೆಚ್ಚು ಜೋರಾಗಿ ಪಟಾಕಿ ಸಿಡಿಸಿದ್ದರಿಂದ ಉಂಟಾದ ಕಂಪನಕ್ಕೆ ಗಾಜುಗಳು ಒಡೆದಿವೆ ಎಂದು ತಿಳಿಸಿ ಸಾರ್ವಜನಿಕರಿಗೆ ಧೈರ್ಯ ತುಂಬುವ ಯತ್ನ ಮಾಡಿದರು. ಆದರೆ, ಪೊಲೀಸರ ಈ ಸ್ಪಷ್ಟನೆಯನ್ನು ಕುಟುಂಬಸ್ಥರು ಸಂಪೂರ್ಣವಾಗಿ ನಿರಾಕರಿಸಿ, ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದಾರೆ.

ತನಿಖೆ ಚುರುಕುಗೊಳಿಸಿದ ತಾಳವಾಡಿ ಪೊಲೀಸರು:
ಪೊಲೀಸರು ನೈಜ ಸಂಗತಿ ಏನೆಂಬುದನ್ನು ವಶಕ್ಕೆ ಪಡೆದಿದ್ದ ಯುವಕರಿಂದ ಬಾಯಿ ಬಿಡಿಸಿದ್ದಾರೆ. ಅಭಿ ಮತ್ತು ಶಿವಕುಮಾರ್ ಎಂಬ ಇಬ್ಬರು ಯುವಕರು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಎರಡು ಆಟಂಬಾಂಬ್ ಪಟಾಕಿಗಳನ್ನು ಒಟ್ಟಿಗೆ ಸೇರಿಸಿ ಸಿಡಿಸಿದ್ದು, ಇದರಿಂದ ಹಾರಿದ ಕಿಡಿ ಪಕ್ಕದಲ್ಲಿದ್ದ ಆಟಂಬಾಂಬ್ ಪಟಾಕಿ ಬಾಕ್ಸ್ಗೆ ಬಿದ್ದು ಒಟ್ಟಿಗೆ ಸ್ಫೋಟಗೊಂಡಿದೆ. ಈ ಸ್ಫೋಟದ ಕಂಪನದಿಂದಾಗಿಯೇ ಮನೆಯ ಗಾಜುಗಳು ಪುಡಿಯಾಗಿವೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಸದ್ಯ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ತಾಳವಾಡಿ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ. ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಕೂಡ ನಡೆಸಿದ್ದಾರೆ. ಆರಂಭದಲ್ಲಿ ಕಚ್ಚಾ ಬಾಂಬ್ ದಾಳಿ ಎನ್ನಲಾಗಿದ್ದ ಪ್ರಕರಣ ಕೊನೆಗೂ ಪಟಾಕಿ ಸ್ಫೋಟವೆಂದು ಪೊಲೀಸ್ ತನಿಖೆಯಲ್ಲಿ ಸಾಬೀತಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯುವುದರ ಮೂಲಕ ತಾಳವಾಡಿ ಪೊಲೀಸರು ಸದ್ಯಕ್ಕೆ ಹರಡಿದ್ದ ಆತಂಕದ ವಾತಾವರಣಕ್ಕೆ ತೆರೆ ಎಳೆದಿದ್ದಾರೆ

ಏನಿದು ಪ್ರಕರಣ?
ಡಾ.ರಾಜ್‌ಕುಮಾರ್ ಅವರ ದೂರದ ಸಂಬಂಧಿ ಮಂಗಮ್ಮ ಎಂಬುವರ ಮನೆಯ ಮುಂದೆ ಈ ಘಟನೆ ನಡೆದಿದ್ದು, ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜುಗಳು ಸಂಪೂರ್ಣವಾಗಿ ಪುಡಿಪುಡಿಯಾಗಿವೆ. ಶಬ್ದ ಕೇಳಿ ಹೊರಬಂದು ನೋಡಿದಾಗ ಮನೆ ತುಂಬಾ ಹೊಗೆ ಆವರಿಸಿಕೊಂಡಿದ್ದು, ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಐವರು ಯುವಕರು ನಿಂತಿದ್ದರು. ತಕ್ಷಣವೇ ಜಾಗರೂಕರಾದ ಕುಟುಂಬಸ್ಥರು ಯುವಕರ ವಿಡಿಯೋ ಮಾಡಿಕೊಂಡು, ಪ್ರಾಣಕ್ಕೆ ಹಾನಿ ಮಾಡುವ ಉದ್ದೇಶದಿಂದಲೇ ಕಚ್ಚಾ ಬಾಂಬ್ ಎಸೆದಿದ್ದಾರೆ ಎಂದು ಆರೋಪಿಸಿ ತಾಳವಾಡಿ ಪೊಲೀಸರಿಗೆ ವೀಡಿಯೋ ನೀಡಿದ್ದರು.


Spread the love

About Laxminews 24x7

Check Also

ಪ್ರೀತಿಸಿ ಮದುವೆಯಾದ ನವವಿವಾಹಿತೆ ಆತ್ಮಹತ್ಯೆ – ವರದಕ್ಷಿಣೆ ಕಿರುಕುಳ ಆರೋಪ

Spread the loveಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಮದುವೆಯಾಗಿ ವರ್ಷ ಕಳೆಯುವ ಮುನ್ನವೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ