ಬೆಂಗಳೂರು: ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರ್ಕಾರ ಒಂದಿಲ್ಲೊಂದು ಶಾಕ್ ನೀಡುತ್ತಲೇ ಇದೆ. ನಂದಿನಿ ಹಾಲು, ಮೊಸರಿನ ದರ, ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಇದೀಗ ಲಗೇಜ್ ಸಾಗಣೆ ದರವೂ ಏರಿಕೆ ಮಾಡಿದೆ.
ಸಾರಿಗೆ ಇಲಾಖೆ ಕೆಎಸ್ಆರ್ಟಿಸಿಯ ನಾಲ್ಕು ನಿಗಮಗಳು ಹಾಗೂ ನಗರ ಸಾರಿಗೆ ಬಸ್ಗಳ ಟಿಕೆಟ್ ದರ ಏರಿಕೆ ಮಾಡಿದ ಬೆನ್ನಲ್ಲೇ ಇದೀಗ ಲಗೇಜ್ ಸಾಗಣೆ ದರವನ್ನು ಹೆಚ್ಚಿಸಿದೆ.
ಪ್ರಯಾಣಿಕರಿಗೆ 10 ಕೆ.ಜಿ.ವರೆಗಿನ ಲಗೇಜ್ ಉಚಿತವಾಗಿ ಸಾಗಿಸಲು ಅವಕಾಶವಿದೆ. ಜೊತೆಗೆ 20 ಕೆ.ಜಿ.ವರೆಗಿನ ಭಾರವಾದ ಸಾಮಗ್ರಿಗಳ ಉಚಿತ ಸಾಗಣೆಗೂ ಅವಕಾಶವಿದೆ. ಆದರೆ ನಿಗದಿತ ಮಿತಿಗಿಂತ ಹೆಚ್ಚಿನ ತೂಕದ ಲಗೇಜ್ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಇಂದಿನಿಂದ ಲಗೇಜ್ ಸಾಗಣೆ ಶುಲ್ಕವನ್ನು ಕೆಎಸ್ಆರ್ಟಿಸಿ ನಿಗಮ ಏರಿಕೆ ಮಾಡಿದ್ದು, ಈಗಾಗಲೇ ಪರಿಷ್ಜೃತ ದರ ಜಾರಿಯಾಗಿದೆ.
ಏನಿದೆ ಹೊಸ ದರ?
ಸ್ಟೇಜ್. ಹಳೆ ದರ – ಹೊಸ ದರ
ಮೊದಲ 5 ಸ್ಟೇಜ್ – 6 ರೂ. – 10 ರೂ.
6-10 ಸ್ಟೇಜ್ – 10 ರೂ. – 15 ರೂ.
11-15 ಸ್ಟೇಜ್ – 20 ರೂ. – 25 ರೂ.
Laxmi News 24×7