Breaking News

11 ದಿನದಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರಿಂದ ಹಾಸನಾಂಬೆ ದರ್ಶನ – ಇಂದು ದೇವಾಲಯದ ಗರ್ಭಗುಡಿ ಬಾಗಿಲು ಬಂದ್‌

Spread the love

ಹಾಸನ: ಕಳೆದ 11 ದಿನಗಳ ಅವಧಿಯಲ್ಲಿ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿ 30 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. ಇಂದು ಹಾಸನಾಂಬ ದೇವಾಲಯದ  ಗರ್ಭಗುಡಿ ಬಾಗಿಲು ಬಂದ್‌ ಆಗಲಿದೆ.

ಕೊನೆ ದಿನವಾದ್ದರಿಂದ ಇಂದು ಬೆಳಗ್ಗೆ 6 ಗಂಟೆಯವರೆಗೆ ಭಕ್ತರು ನಿರಂತರ ಹಾಸನಾಂಬೆ ದರ್ಶನ ಪಡೆದರು. ಇಂದು ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಿದೆ.

ಕೆಲವೇ ಕ್ಷಣಗಳಲ್ಲಿ ಸಿದ್ದೇಶ್ವರಸ್ವಾಮಿ ಕೆಂಡೋತ್ಸವ ನೆರವೇರಲಿದೆ. ಈ ಹಿನ್ನೆಲೆ ದೇವಾಲಯದ ಮುಂದೆ ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದಾರೆ.

ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ ಇತಿಹಾಸ ಬರೆದಿದೆ. ಅ.30 ರಿಂದ ನ.11 ರ ಬೆಳಗ್ಗೆ 6 ಗಂಟೆಯವರೆಗೆ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ. 1000 ರೂ., 300 ರೂ.ನ ವಿಶೇಷ ದರ್ಶನದ ಟಿಕೆಟ್‌ ಮಾರಾಟ ಹಾಗೂ ಲಾಡು ಮಾರಾಟದಿಂದ 25.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ದೀಪಾವಳಿ ಪಟಾಕಿ ಅವಘಡ; ಪಟಾಕಿ ಸಿಡಿದು ಗಂಭೀರ ಗಾಯಗೊಂಡ ಗರ್ಭಿಣಿ

Spread the loveಬೆಂಗಳೂರು: ನಗರದಲ್ಲಿ ದೀಪಾವಳಿ ಪಟಾಕಿ ಅವಘಡಕ್ಕೆ ಇಂದು ಕೂಡ 80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಟಾಕಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ