Breaking News

ಹೆಂಡ್ತಿ ಮೇಲಿನ ಸಿಟ್ಟಿಗೆ ಬೆಂಗ್ಳೂರಲ್ಲಿ ಏಳು ಮರ್ಡರ್ – ಕೊಲೆಗೈದು ನಂದಿ ಬೆಟ್ಟದಲ್ಲಿ ಮೃತದೇಹ ಎಸೆದಿರುವ ಹಂತಕ

Spread the love

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಮರ್ಡರ್‌ವೊಂದು ನಡೆದಿದೆ. ಹೆಂಡತಿ ಮೇಲಿನ ಸಿಟ್ಟಿಗೆ ಪತಿ ಏಳು ಜನರನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ  ಶ್ರೀರಾಂಪುರದಲ್ಲಿ  ಬೆಳಕಿಗೆ ಬಂದಿದೆ.

ಆರೋಪಿಯನ್ನು ಶ್ರೀರಾಂಪುರ ನಿವಾಸಿ ಶೇಖರ್ ಎಂದು ಗುರುತಿಸಲಾಗಿದ್ದು, ಖಾಸಗಿ ಕಂಪನಿಯೊಂದಕ್ಕೆ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿ ಮಾಡಿರೋದು ಒಂದಲ್ಲ.. ಎರಡಲ್ಲ.. ಮೂರಲ್ಲ.. ಬರೋಬ್ಬರಿ ಏಳು ಜನರ ಮರ್ಡರ್. ಹೆಂಡತಿ ಬೈಯುತ್ತಿದ್ದಳು, ಗಲಾಟೆ ಮಾಡುತ್ತಿದ್ದಳು ಎಂಬ ಸಿಟ್ಟಿಗೆ ಪತ್ನಿ ಜೊತೆ ಅತ್ತೆ, ಪತ್ನಿಯ ಇಬ್ಬರು ಅಣ್ಣಂದಿರು, ಇಬ್ಬರು ಅತ್ತಿಗೆ ಹಾಗೂ 7 ವರ್ಷದ ಮಗನ ಕೊಲೆ ಮಾಡಿದ್ದಾನೆ. ರುಬ್ಬುವ ಕಲ್ಲು ಬಳಸಿ ಹತ್ಯೆಗೈದು, ಬಳಿಕ ಅದನ್ನು ತೊಳೆದಿಟ್ದಿದ್ದಾನೆ ಎನ್ನಲಾಗಿದೆ. ಆನಂತರ ತನ್ನ ಕ್ಯಾಬ್‌ನಲ್ಲಿಯೇ ಮೃತದೇಹಗಳನ್ನು ನಂದಿ ಬೆಟ್ಟ ಹೀಗೆ ಬೇರೆ ಅರಣ್ಯ ಪ್ರದೇಶಗಳಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

`ಪಬ್ಲಿಕ್ ಟಿವಿ’ ಜೊತೆ ಉತ್ತರ ವಿಭಾಗದ ಡಿಸಿಪಿ ನ್ಯಾಮೆಗೌಡ ಮಾತನಾಡಿ, ಕುಟುಂಬಸ್ಥರೆಲ್ಲರನ್ನೂ ಕೊಂದು ಕೊನೆಗೆ ಆರೋಪಿಯೇ ಬಂದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ಕೂಡ ಕೊಟ್ಟಿದ್ದ. 15 ದಿನದ ಹಿಂದೆ ಹೆಂಡತಿ ಹಾಗೂ ಮನೆಯವರು ನಾಪತ್ತೆಯಾಗಿರುವುದಾಗಿ ಆರೋಪಿ ದೂರು ನೀಡಿದ್ದ. ಸದ್ಯ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ರಾಜಾಜಿನಗರ ಹಾಗೂ ಶ್ರೀರಾಮ್‌ಪುರ ಪೊಲೀಸರಿಂದ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಆರೋಪಿಯನ್ನು ಬಂಧಿಸಿ, ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇತ್ತ ಪೊಲೀಸರು ಏಳು ಬಾಡಿಗಳನ್ನ ಕೂಡ ಬೇರೆ ಬೇರೆ ಕಡೆ ಎಸೆದಿರುವ ಶಂಕೆಯ ಮೇಲೆ ಹುಡುಕಾಟ ನಡೆಸುತ್ತಿದ್ದಾರೆ.ಇ


Spread the love

About Laxminews 24x7

Check Also

ಬೆಂಗ್ಳೂರು ಸರಣಿ ಹತ್ಯೆ ಕೇಸ್ – ನರಹಂತಕ ಇಂದುಶೇಖರ್ 14 ದಿನ ಪೊಲೀಸ್‌ ಕಸ್ಟಡಿಗೆ

Spread the loveಬೆಂಗಳೂರು: ನಗರದಲ್ಲಿ  ನಡೆದ ಸರಣಿ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್‌ನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ