Breaking News

ಗಾಳಿ, ನೀರಿನಲ್ಲಿ ಬಸ್ ಓಡಿಸೋಕೆ ಆಗಲ್ಲ: ಪ್ರಿಯಾಂಕ್ ಖರ್ಗೆ

Spread the love

ಬೆಂಗಳೂರು: ಗಾಳಿ, ನೀರಿನಲ್ಲಿ ಬಸ್ ಓಡಿಸೋಕೆ ಆಗಲ್ಲ ಅಂತ ಬಸ್ ಟಿಕೆಟ್ ದರ ಏರಿಕೆಯನ್ನ ಗೃಹ ಸಚಿವ ಪ್ರಿಯಾಂಕ್ ಖರ್ಗೆ  ಸಮರ್ಥನೆ ಮಾಡಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಸ್ ದರ ಏರಿಕೆಗೆ ಜವಾಬ್ದಾರಿ ಯಾರು? ಬಸ್ ಗಾಳಿಯಲ್ಲಿ, ನೀರಿನಲ್ಲಿ ನಡೆಸೋಕೆ ಆಗುತ್ತಾ? ಪೆಟ್ರೋಲ್, ಡೀಸೆಲ್‌ನಲ್ಲಿ ನಡೆಯೋದು.‌ ಮೋದಿ ಮಾಸ್ಟರ್ ಸ್ಟ್ರೋಕ್ ರಷ್ಯಾದಿಂದ ಕಚ್ಚಾ ತೈಲ ತಗೋತೀವಿ ಅಂದರು. ಕಡಿಮೆಯಲ್ಲಿ ಖರೀದಿ ಮಾಡಿರೋದನ್ನ ಜನರಿಗೆ ಯಾಕೆ ಕೊಡ್ತಿಲ್ಲ. ಅವರು ಮೊದಲು ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲಿ ಎಂದು ಆಗ್ರಹಿಸಿದರು.

ನಾವು ಸಾರಿಗೆ ನಡೆಸೋದು ಯಾಕೆ? ಕೇಂದ್ರದವರು ದರ ಏರಿಕೆ ಮಾಡಿದ್ರೆ ದೇಶಕ್ಕೋಸ್ಕರ. ನಾವು ಮಾಡಿದ್ರೆ ಅದು ಬರೆನಾ?. ಬಿಜೆಪಿ ಅವರು ಮೋದಿ ಮುಂದೆ ಹೋಗಿ ಪ್ರತಿಭಟನೆ ಮಾಡಿ. ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡೋಕೆ ಹೇಳಲಿ. ಆಗ ಬಸ್‌ ದರ ಕೂಡ ಕಡಿಮೆ ಆಗುತ್ತದೆ. ಮೆಟ್ರೋ, ಬಸ್ ದರ ಏರಿಕೆ ಕಾರಣ ಇಲ್ಲದೆ ಆಗೊಲ್ಲ. ಪೆಟ್ರೋಲ್, ಡೀಸೆಲ್ ಜಾಸ್ತಿ ಆದಾಗ ಯಾಕೆ ಬಿಜೆಪಿ ಅವರು ಕೇಳೊಲ್ಲ. ಪಾಮ್ ಆಯಿಲ್, ಅಡುಗೆ ಎಣ್ಣೆ, ಕಾಳುಗಳ ಬೆಲೆ ಜಾಸ್ತಿ ಆದಾಗ ಯಾಕೆ ಬಿಜೆಪಿ ಪ್ರತಿಭಟನೆ ಮಾಡಿಲ್ಲ. ಕೇವಲ ನಮ್ಮ ಬಳಿ ಲೆಕ್ಕ ಕೇಳೋದು ಅಷ್ಟೆ ಅಂತ ಬಿಜೆಪಿ ಪ್ರತಿಭಟನೆಗೆ ಕಿಡಿಕಾರಿದರು.


Spread the love

About Laxminews 24x7

Check Also

ಪುತ್ರಿಯೊಂದಿಗೆ ಸಲುಗೆ ಕೆಲಸಗಾರನ ಹತ್ಯೆಗೈದ ತಂದೆ

Spread the loveಬೆಂಗಳೂರು: ಮನೆಯಲ್ಲಿ ಪುತ್ರಿಯೊಂದಿಗೆ ಸಿಕ್ಕಿಬಿದ್ದ ಕೇರಳ ಮೂಲದ ಕೆಲಸಗಾರನನ್ನು ತಂದೆಯೇ ಕ್ರಿಕೆಟ್ ಬ್ಯಾಟ್ ಹಾಗೂ ಪೈಪ್‌ನಿಂದ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ