Breaking News

ಸೋದರ ಸಂಬಂಧಿ ಜೊತೆಯೇ ಪತ್ನಿಯ ಅನೈತಿಕ ಸಂಬಂಧ*: ಮನನೊಂದ ಪತಿ ಆತ್ಮಹತ್ಯೆ

Spread the love

ಸೋದರ ಸಂಬಂಧಿ ಜೊತೆಯೇ ಪತ್ನಿ ಅನೈತಿಕ ಸಂಬಂಧ ಹೊಂದಿ, ಎರಡನೇ ಮಗುವಿಗೆ ತಾಯಿಯಾಗುತ್ತಿರುವುದನ್ನು ತಿಳಿದು ಮನನೊಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಪತ್ನಿಯ ಕೃತ್ಯಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ಮುನಿಕೃಷ್ಣ (35) ಎಂದು ಗುರುತಿಸಲಾಗಿದೆ. ಈ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.

ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮುನಿಕೃಷ್ಣ 10 ವರ್ಷಗಳ ಹಿಂದೆ ನಯನ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಒಬ್ಬ ಗಂಡು ಮಗ ಇದ್ದಾನೆ. ಪ್ರಸ್ತುತ ನಯನ ಎರಡನೇ ಮಗುವಿನ ಗರ್ಭಿಣಿಯಾಗಿದ್ದರು. ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ನಡೆಯುತ್ತಿದ್ದಾಗ ಮುನಿಕೃಷ್ಣನ ಸಂಬಂಧಿ ಕುಮಾರ ಎಂಬಾತ ಎಂಟ್ರಿಕೊಟ್ಟಿದ್ದ.

ಕುಮಾರ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈತ ನಯನಾಳನ್ನು ಕೆಲಸಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ. ಸಂಬಂಧದಲ್ಲಿ ತಮ್ಮನಾಗಿರೋದ್ರಿಂದ ಯಾರು ಪ್ರಶ್ನೆ ಮಾಡಿರಲಿಲ್ಲ. ಆದರೆ ಕಳೆದೆರಡು ವರ್ಷದಿಂದ ಮುನಿಕೃಷ್ಣನ ಪತ್ನಿ ನಯನ ಜೊತೆ ಕುಮಾರ ಲವ್ವಿಡವ್ವಿ ನಡೆಸುತ್ತಿದ್ದ. ಮುನಿಕೃಷ್ಣ ಆಟೋ ತೆಗೆದುಕೊಂಡು ಹೋಗುತ್ತಿದ್ದಂತೆ ಕುಮಾರ ಮನೆಗೆ ಬರುತ್ತಿದ್ದ.

ಕೆಲ ದಿನಗಳ ಹಿಂದೆ ಮುನಿಕೃಷ್ಣನಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದ ಕುಮಾರ, ಇಬ್ಬರು ಜೊತೆಗಿರುವ ಫೋಟೋ, ಅಸಭ್ಯ ವಿಡಿಯೋಗಳನ್ನ ಕಳಿಸಿದ್ದ. ಜೊತೆಗೆ ಇಬ್ಬರು ವಾಟ್ಸಾಪ್ ಚಾಟ್ ಮಾಡಿಕೊಂಡಿರೋದನ್ನ ಕಳುಹಿಸಿದ್ದ. ಅಲ್ಲದೇ ನಯನಾಳ ಹೊಟ್ಟೆಯಲ್ಲಿರುವುದು ತನ್ನ ಮಗು ಎಂದು ಮೆಸೇಜ್ ಮಾಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಮುನಿಕೃಷ್ಣ ಹಾಗೂ ನಯನ ನಡುವೆ ಗಲಾಟೆಯಾಗಿತ್ತು. ಬಳಿಕ ನಯನ ತವರು ಮನೆ ಸೇರಿದ್ದಳು.

ಇಷ್ಟಕ್ಕೆ ಸುಮ್ಮನಾಗದ ಕುಮಾರ, ಪದೇ ಪದೇ ಮುನಿಕೃಷ್ಣನನ್ನು ಹೀಯಾಳಿಸುವುದು, ರಸ್ತೆಯಲ್ಲಿ ಓಡಾಡುವಾಗ ಅವಮಾನಿಸುವುದು ಮಾಡುತ್ತಿದ್ದ. ಇಷ್ಟಾದರೂ ಗ್ರಾಮದಲ್ಲಾಗಲಿ, ಕುಟುಂಬದವರಿಗಾಗಲಿ, ಕುಮಾರ ಹಾಗೂ ನಯನಾ ಬಗ್ಗೆ ವಿಷಯ ಗೊತ್ತಿರಲಿಲ್ಲ. ಇದರಿಂದ ತೀವ್ರವಾಗಿ ಬೇಸತ್ತಿದ್ದ ಮುನಿಕೃಷ್ಣ, ಆತ್ಮಹತ್ಯೆಗೆ ಒಂದು ದಿನ ಮೊದಲು ತನ್ನ ಸಹೋದರನಿಗೆ ಕರೆ ಮಾಡಿ ವಿಷಯವನ್ನು ಹೇಳಿದ್ದ. ಮಾರನೆ ದಿನ ನೇಣಿಗೆ ಕೊರಳೊಡ್ದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷಯ ತಿಳಿದ ಕುಟುಂಬಸ್ಥರು ಮಗನ ಸಾವಿಗೆ ಕಾರಣವಾದ ನಯನ ಹಾಗೂ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.


Spread the love

About Laxminews 24x7

Check Also

ಸ್ಟಿಂಗ್ ಆಪರೇಷನ್ ಮಾಡಿದವರನ್ನು ಒದ್ದು ಒಳಗೆ ಹಾಕಬೇಕು: ಸಚಿವ ಎಂ.ಬಿ.ಪಾಟೀಲ್ ಆಕ್ರೋಶ

Spread the loveರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿರುವ ಸ್ಟಿಂಗ್ ಆಪರೇಷನ್ ವಿವಾದದ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ