Breaking News

ಹಾಸನದಲ್ಲಿ ಅಕ್ರಮ ಪಬ್‌ಗಳ ಮೇಲೆ ಖಾಕಿ ದಾಳಿ: ಅಪ್ರಾಪ್ತರಿಗೆ ಮದ್ಯ ಸರಬರಾಜು ಪತ್ತೆ

Spread the love

ಹಾಸನ: ನಗರದಲ್ಲಿ ನಿಯಮ ಉಲ್ಲಂಘಿಸಿ ನಡೆಸುತ್ತಿದ್ದ ಪಬ್ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರು ನಿನ್ನೆ ರಾತ್ರಿ ದಾಳಿ ನಡೆಸಿದ್ದಾರೆ.

ಹಾಸನ ನಗರದಲ್ಲಿರುವ ಪ್ರತಿಷ್ಠಿತ ಪಬ್‌ಗಳ ಮೇಲೆ ಎ‌ಎಸ್‌ಪಿ, ಡಿವೈಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪಬ್‌ನ ಲೈಸನ್ಸ್ ಹಾಗೂ ಇನ್ನಿತರೆ ದಾಖಲೆಗಳನ್ನು ತೋರಿಸುವಂತೆ ಪಬ್‌ನ ಮ್ಯಾನೇಜರ್‌ಗೆ ಪ್ರಶ್ನಿಸಿದ್ದು ಸರಿಯಾದ ದಾಖಲೆಗಳನ್ನು ನೀಡಲು ಮ್ಯಾನೇಜರ್ ಪರದಾಡಿದ್ದಾರೆ.

ತಪಾಸಣೆ ವೇಳೆ ಇಬ್ಬರು ಅಪ್ರಾಪ್ತರಿಗೆ ಪಬ್ ಒಳಗೆ ಎಂಟ್ರಿ ಕೊಟ್ಟಿರುವುದಲ್ಲದೇ ಮದ್ಯ ಸರಬರಾಜು ಮಾಡಿರುವುದು ಕಂಡು ಬಂದಿದೆ. ಇಬ್ಬರು ಅಪ್ರಾಪ್ತರನ್ನು ಪೊಲೀಸರು ಆಲ್ಕೋಮೀಟರ್ ಮೂಲಕ ತಪಾಸಣೆ ನಡೆಸಿದ ವೇಳೆ ಇಬ್ಬರು ಮದ್ಯ ಸೇವಿಸಿರುವುದು ದೃಢವಾಗಿದ್ದು, ಈ ವೇಳೆ ಪಬ್‌ನ ಮ್ಯಾನೇಜರ್‌‌ನ್ನು ಎಸ್ಪಿ‌ ಶುಭನ್ವಿತಾ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಯಮಗಳನ್ನು ಗಾಳಿಗೆ ತೂರಿ ಅಪ್ರಾಪ್ತರಿಗೆ ಮದ್ಯ ನೀಡಿರುವುದಕ್ಕೆ ಪಬ್‌ನ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಶುಭನ್ವಿತಾ ಸೂಚನೆ ನೀಡಿದ್ದಾರೆ‌.


Spread the love

About Laxminews 24x7

Check Also

ಮುಂದುವರಿದ ಮಹದೇವಪ್ಪ ಮುನಿಸು – ಸಿದ್ರಾಮಯ್ಯಗೆ ಆಹ್ವಾನವಿಲ್ಲದೇ ʻಸಂವಿಧಾನ ದಿನʼ ಆಚರಣೆ

Spread the loveಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ  ಹಾಗೂ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ  ಅವರ ನಡುವಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ