ಮೈಸೂರು: ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ ಕಟೌಟ್ ಏಕಾಏಕಿ ಮುರಿದು ಬಿದ್ದಿದೆ.
ಟಿಟಿ ವಾಹನದ ಮೇಲೆ ವಿದ್ಯುತ್ ದೀಪಾಲಂಕಾರದ ಕಟೌಟ್ ಬಿದ್ದಿದೆ ವಾಹನ ಚಾಲಕ ಅದೃಷ್ಟ ವಶಾತ್ ಪ್ರಾಣಾಪಾಯಾದಿಂದ ಪಾರಾಗಿದ್ದಾನೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಹಾಗೂ ಗುತ್ತಿಗೆ ಪಡೆದ ಮೋಹನ್ ಎಂಬ ವ್ಯಕ್ತಿಯ ಬೇಜವಾಬ್ದಾರಿತನದಿಂದ ಕಟೌಟ್ ಮುರಿದು ಬಿದ್ದಿದೆ. ಬೃಹತ್ ಲೈಟ್ ಕಟೌಟ್ ಗೆ ಅರ್ಧ ಅಡಿ ಗುಂಡಿ ತೆಗೆದು ಕಂಬ ಹಾಕಿದ ಕಾರಣ ಕಟೌಟ್ ಕೆಳಗೆ ಬಿದ್ದಿದೆ.
ಕಟೌಟ್ ಅಳವಡಿಸಿದ ನಾಲ್ಕೇ ದಿನಕ್ಕೆ ಮುರಿದು ಬಿದ್ದಿದೆ. ನೆಲಕ್ಕೆ ಅಪ್ಪಳಿಸಿದ ವಿದ್ಯುತ್ ದೀಪಾಲಂಕಾರದ ಕಟೌಟ್.
Laxmi News 24×7