ನಗೋಯ: ಏಷ್ಯನ್ ಗೇಮ್ಸ್‌ನಲ್ಲಿ ಇಂದು ಭಾರತ ಒಂದೇ ದಿನ 6 ಚಿನ್ನದ ಪದಕವನ್ನು ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.
ಗುರುವಾರ ಭಾರತ 10 ಚಿನ್ನ, 23 ಬೆಳ್ಳಿ, 33 ಕಂಚಿನ ಪದಕವನ್ನು ಸೇರಿ ಒಟ್ಟು 66 ಪದಕ ಪಡೆಯುವ ಮೂಲಕ 8ನೇ ಸ್ಥಾನದಲ್ಲಿತ್ತು. ಆದರೆ ಇಂದು 6 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕ ಸೇರಿ ಒಟ್ಟು 10 ಪದಕ ಪಡೆದಿದೆ. ಇಂದು ಬಾಕ್ಸಿಂಗ್‌ನಲ್ಲಿ 3 ಚಿನ್ನದ ಬಂದಿರುವುದು ವಿಶೇಷ. ಭಾರತ ಇಲ್ಲಿಯವರೆಗೆ ಒಟ್ಟು 16 ಚಿನ್ನ, 25 ಬೆಳ್ಳಿ, 35 ಕಂಚು ಸೇರಿ ಒಟ್ಟು 76 ಪದಕ ಪಡೆದಿದೆ.
ಚಿನ್ನದ ಪದಕಗಳು
ಬಾಕ್ಸಿಂಗ್ (ಮಹಿಳೆಯರ 75 ಕೆಜಿ ವಿಭಾಗ): ಲವ್ಲಿನಾ ಬೊರ್ಗೊಹೈನ್ ಅವರು ಚೀನಾದ ಬಾವೊ ಜಿಯಿ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಬಾಕ್ಸಿಂಗ್ (ಮಹಿಳೆಯರ 65 ಕೆಜಿ ವಿಭಾಗ): ಪರ್ವೀನ್ ಹೂಡಾ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 3-2 ಅಂತರದಲ್ಲಿ ಜಯಗಳಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.
ಬಾಕ್ಸಿಂಗ್ (ಪುರುಷರ 80 ಕೆಜಿ ವಿಭಾಗ): ಅಂಕುಶ್ ಪಂಗಲ್ ಅವರು ದಕ್ಷಿಣ ಕೊರಿಯಾದ ಕಿಮ್ ಮಿನ್ಸಿಯಾಂಗ್ ವಿರುದ್ಧ 4-0 ಇಂದ ಗೆದ್ದು ಚಿನ್ನದ ಪದಕ ಪಡೆದಿದ್ದಾರೆ.
ಕುಸ್ತಿ (ಪುರುಷರ ಫ್ರೀಸ್ಟೈಲ್ 65 ಕೆಜಿ): ಸುಜೀತ್ ಕಲ್ಕಲ್ ತಜಕಿಸ್ತಾನದ ಅಬ್ದುಲ್ಮಾಜಿದ್ ಕುಡೀವ್ ವಿರುದ್ಧ 10-9 ಅಂತರದ ರೋಮಾಂಚಕ ಜಯದೊಂದಿಗೆ ಚಿನ್ನದ ಪದಕ ಪಡೆದರು.ಬಿಲ್ಲುಗಾರಿಕೆ (ಮಹಿಳೆಯರ ರಿಕರ್ವ್ ತಂಡ): ಅಂಕಿತಾ ಭಕತ್, ಕೀರ್ತಿ ಶರ್ಮಾ ಮತ್ತು ಕುಮ್ಕುಮ್ ಮೊಹೊಡ್ ಅವರ ತಂಡವು ಬಲಿಷ್ಠ ದಕ್ಷಿಣ ಕೊರಿಯಾವನ್ನು 5-3 ರಿಂದ ಸೋಲಿಸಿ ಐತಿಹಾಸಿಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ.
ಹಾಕಿ: ಮಹಿಳೆಯರ ತಂಡ ಬಲಿಷ್ಠ ಚೀನಾವನ್ನು 1-0 ಗೋಲುಗಳಿಂದ ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟಿದೆ. ಇದರೊಂದಿಗೆ ಲಾಸ್ ಎಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದಿದೆ.
ಬೆಳ್ಳಿ ಪದಕಗಳು
ಬಿಲ್ಲುಗಾರಿಕೆ (ಮಿಶ್ರ ರಿಕರ್ವ್ ತಂಡ): ಕುಮ್ಕುಮ್ ಮೊಹೊಡ್ ಮತ್ತು [ಧೀರಜ್ ಬೊಮ್ಮದೇವರ ಜೋಡಿಯು ಚೀನಾ ವಿರುದ್ಧದ ಫೈನಲ್‌ನಲ್ಲಿ ಹೋರಾಡಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ.
ಬಿಲ್ಲುಗಾರಿಕೆ (ಪುರುಷರ ರಿಕರ್ವ್ ತಂಡ): ಧೀರಜ್ ಬೊಮ್ಮದೇವರ, ನೀರಜ್ ಚೌಹಾಣ್ ಮತ್ತು ಯಶ್‌ದೀಪ್ ಭೋಗೆಅವರ ತಂಡವು ದಕ್ಷಿಣ ಕೊರಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋತು ಬೆಳ್ಳಿ ಪದಕ ಪಡೆಯಿತು.
ಕಂಚಿನ ಪದಕ
ಸೇಯಿಲಿಂಗ್ ( ಮಹಿಳೆಯರ ಡಿಂಗಿ ವಿಭಾಗ): ನೇತ್ರಾ ಕುಮನನ್ ಅವರು ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ.
ಸೆಪಕ್ ತಕ್ರಾ (Sepaktakraw – ಪುರುಷರ ಕ್ವಾಡ್ರಂಟ್): ಭಾರತದ ಪುರುಷರ ತಂಡವು ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ ಹೋರಾಡಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.
Laxmi News 24×7