Breaking News

ಕಬ್ಬು ಬೆಳೆಗಾರರ ಸಭೆಗೆ ಹತ್ತು ದಿನ ಮೊದಲೇ ಸಿಎಂಗೆ ಆಹ್ವಾನ; ಜೋಶಿಯಿಂದ ಡಿಕೆಶಿಗೆ ಪತ್ರ

Spread the love

ನವದೆಹಲಿ: ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆ-ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಅ.12ರಂದು ದೆಹಲಿಯಲ್ಲಿ ನಡೆಯಲಿರುವ ಮಹತ್ವದ ಸಭೆಗೆ ಆಗಮಿಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಹತ್ತು ದಿನಗಳ ಮೊದಲೇ ಪತ್ರ ಬರೆದು ಆಹ್ವಾನಿಸಿದ್ದಾರೆ.

2026–27ರ ಕಬ್ಬು ನುರಿಸುವ ಋತುವಿನಲ್ಲಿ ರಾಜ್ಯದ ಕಬ್ಬು ಬೆಳೆಗಾರರಿಗೆ ಕಬ್ಬಿನ ದರಕ್ಕೆ ಸಂಬಂಧಿಸಿದಂತೆ ಮಹತ್ತರ ಚರ್ಚೆ ನಡೆಸಲು ನವದೆಹಲಿಯ ಕೃಷಿ ಭವನದಲ್ಲಿ ಅ.12ರಂದು ಮಧ್ಯಾಹ್ನ 3 ಗಂಟೆಗೆ ಸಭೆ ಆಯೋಜಿಸಿದ್ದು, ರಚನಾತ್ಮಕ ಚರ್ಚೆಯಲ್ಲಿ ತಾವು ಭಾಗಿಯಾಗಿ ಅಭಿಪ್ರಾಯ ಹಂಚಿಕೊಳ್ಳಬೇಕು ಎಂದು ಜೋಶಿ ಕೋರಿದ್ದಾರೆ.

ಕರ್ನಾಟಕದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಮಹತ್ವದ್ದೆನಿಸಿದ ಅಂದಿನ ಸಭೆಯಲ್ಲಿ ತಾವು ಖುದ್ದಾಗಿ ಪಾಲ್ಗೊಳ್ಳಬೇಕು. ಅಥವಾ ತಮ್ಮ ಪರವಾಗಿ ರಾಜ್ಯದ ಸಂಬಂಧಪಟ್ಟ ಸಚಿವರನ್ನು ಕಳುಹಿಸಿಕೊಡುವಂತೆಯೂ ಕೇಂದ್ರ ಸಚಿವರು ಆಹ್ವಾನ ನೀಡಿದ್ದಾರೆ.

ಕಬ್ಬು ಅರೆಯುವ ಹಂಗಾಮು ಶುರು
2026-27ರ ಹೊಸ ಕಬ್ಬು ಅರೆಯುವ ಹಂಗಾಮು ಅ.1ರಿಂದ ಪ್ರಾರಂಭವಾಗಿದೆ. ಆಯಾ ಪ್ರದೇಶಗಳಲ್ಲಿನ ಪ್ರಸ್ತುತ ಕೃಷಿ-ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಕಾಲಿಕ ಕಬ್ಬು ಕಟಾವು ಮತ್ತು ಅರೆಯುವಿಕೆ ಕಾರ್ಯಚಟುವಟಿಕೆ ಆರಂಭಿಸುವಂತೆ ಆಗಲೇ ರಾಜ್ಯ ಸರ್ಕಾರಗಳಿಗೆ ಸೂಚನೆ ಸಹ ನೀಡಲಾಗಿದೆ.

ಕೇಂದ್ರ ಸರ್ಕಾರ ನಿಗದಿಪಡಿಸಿದ FRP ಹೊರತಾಗಿ ಹೆಚ್ಚುವರಿ ಕಬ್ಬಿನ ಬೆಲೆಗಾಗಿ ಕರ್ನಾಟಕದ ರೈತರು ಬೇಡಿಕೆ ಮುಂದಿಡುತ್ತಿದ್ದು, ಸಕ್ಕರೆ ವಲಯದಲ್ಲಿ ಸಮತೋಲನ ಕಾಯ್ದುಕೊಳ್ಳುವ ಜತೆಗೆ ಕಬ್ಬು ಬೆಳೆಗಾರರಿಗೂ ಲಾಭದಾಯಕ ಆದಾಯಕ್ಕಾಗಿ ಸರ್ಕಾರ ಪ್ರತಿ ವರ್ಷ FRP ಹೆಚ್ಚಿಸುತ್ತಿದೆ. ಅಂತೆಯೇ 2026-27ನೇ ಸಾಲಿನಲ್ಲಿ FRPಯನ್ನು ಪ್ರತಿ ಕ್ವಿಂಟಾಲ್‌ಗೆ 365 ರೂ.ಗೆ ಹೆಚ್ಚಿಸಲಾಗಿದೆ. ಇದು ಕಬ್ಬಿನ ಉತ್ಪಾದನಾ ವೆಚ್ಚದ ಮೇಲೆ ಶೇ.100.5ರಷ್ಟು ಲಾಭಾಂಶವನ್ನು ಒದಗಿಸುತ್ತದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ ಸಚಿವ ಜೋಶಿ.

2026ರ ಅಕ್ಟೋಬರ್ 1ರಿಂದಲೇ ಕಬ್ಬು ಬೆಳೆಗಾರರು ಪ್ರತಿ ಕ್ವಿಂಟಾಲ್‌ಗೆ 365 ರೂ. FRP ಪಡೆಯಲಿದ್ದಾರೆ. ಇನ್ನು ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿ ಬಗ್ಗೆ ಕೇಂದ್ರ ಸರ್ಕಾರ ಯಾವತ್ತೂ ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಬಂದಿದೆ ಎಂದೂ ಹೇಳಿದ್ದಾರೆ.

ರಾಜ್ಯದ ಕಬ್ಬು ಬೆಳೆಗಾರರ ಪ್ರಸ್ತುತ ಸಮಸ್ಯೆ, ಆತಂಕಗಳನ್ನು ಆಲಿಸಿ, ರಚನಾತ್ಮಕ ಸಂವಾದ ನಡೆಸಲೆಂದು ಕರ್ನಾಟಕದ ರೈತ ಮುಖಂಡರ ಸಭೆ ಕರೆದಿದ್ದು, ತಮ್ಮೊಂದಿಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರು ಭಾಗವಹಿಸುತ್ತಿದ್ದಾರೆ. ತಾವೂ ಖುದ್ದಾಗಿ ಭಾಗವಹಿಸಬೇಕು ಎಂದು ಸಿಎಂಗೆ ಬರೆದ ಪತ್ರದಲ್ಲಿ ಕೋರಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ.


Spread the love

About Laxminews 24x7

Check Also

ಬೀಡಾಡಿ ದನವನ್ನು ಕಾರಿಗೆ ತುಂಬಿಕೊಂಡು ಪರಾರಿ: ಪ್ರಮುಖ ಆರೋಪಿ ಬಂಧನ

Spread the loveಉಡುಪಿ: ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು  ಹಿಂಸಾತ್ಮಕವಾಗಿ ಎಳೆದುಕೊಂಡು ಹೋಗಿ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ