Breaking News

ಕಿಡ್ನ್ಯಾಪ್‌ ನಾಟಕವಾಡಿ 90 ಲಕ್ಷಕ್ಕೆ ಡಿಮ್ಯಾಂಡ್‌ – ತಂದೆಗೆ ಯಾಮಾರಿಸಲು ಯತ್ನಿಸಿದ ಮಗ ಅರೆಸ್ಟ್‌

Spread the love

ಬೆಂಗಳೂರು: ಕಿಡ್ನ್ಯಾಪ್‌  ನಾಟಕವಾಡಿ ತಂದೆಗೆ 90 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮಗನನ್ನು ಆರ್‌.ಆರ್‌ ನಗರ ಪೊಲೀಸರು  ಬಂಧಿಸಿದ್ದಾರೆ.

ಮನೀಷ್ (40) ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ತಂದೆ ಮನೋಹರ್ ಪಟೇಲ್ (62) ಅವರಿಗೆ ಸ್ನೇಹಿತರ ಮೂಲಕ ತನ್ನದೇ ನಂಬರ್‌ನಿಂದ ವಾಟ್ಸಾಪ್ ಕರೆ ಮಾಡಿಸಿ, ನಿಮ್ಮ ಮಗನನ್ನು ಕಿಡ್ನ್ಯಾಪ್‌ ಮಾಡಿದ್ದೇವೆ ಎಂದು ಹೇಳಿಸಿದ್ದ. ಅಲ್ಲದೇ 90 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ.

ಹಿಂದಿನ ದಿನ ಹಣದ ವ್ಯವಹಾರಕ್ಕೆಂದು ರೈಲಿನಲ್ಲಿ ಗದಗಕ್ಕೆ ಹೋಗುವುದಾಗಿ ಮನೀಷ್ ಹೇಳಿ ಹೋಗಿದ್ದ. ಬೆಳಗ್ಗೆ ಫೋನ್ ಮಾಡ್ತೀನಿ ಎಂದಿದ್ದ, ಬೆಳಗ್ಗೆ ಕರೆ ಬಂದಾಗ ಮಗನ ಕಿಡ್ನ್ಯಾಪ್‌ ಆಗಿದೆ ಎಂದಾಗ ಗಾಬರಿಗೊಂಡಿದ್ದ ಮನೋಹರ್‌, ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.

ಬಳಿಕ ಪೊಲೀಸರು ಮನೀಷ್ ಮೊಬೈಲ್ ಟ್ರ‍್ಯಾಕ್ ಮಾಡಿದ್ದರು. ಆದರೆ ಮೊಬೈಲ್ ಸ್ವಿಚ್ ಆಗಿತ್ತು. ಬಳಿಕ ಒಂದು ನಂಬರ್‌ನಿಂದ ದೂದಾರರಿಗೆ ಹಣ ಅರೆಂಜ್ ಆಯ್ತಾ ಅಂತ ಒಂದು ಫೋನ್ ಬಂದಿತ್ತು. ಕರೆ ಬಂದ ನಂಬರ್ ಟ್ರ‍್ಯಾಕ್ ಮಾಡಿ ಮಾಹಿತಿ ಪಡೆದು ಹಾಸನ ಭಾಗದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಮನೀಷ್ ಇನ್ನಿಬ್ಬರು ವ್ಯಕ್ತಿಗಳ ಜೊತೆ ಆರಾಮಗಿ ಒಂದು ರೂಮ್ ನಲ್ಲಿ ಮಲಗಿರುವುದು ಪತ್ತೆಯಾಗಿತ್ತು.

ಪೊಲೀಸರು ವಿಚಾರಣೆ ನಡೆಸಿದಾಗ ಮನೀಷ್ ಕಿಡ್ನಾಪ್ ನಾಟಕ ಆಡಿ ತಂದೆಯಿಂದ ಹಣ ಕೀಳಲು ಮುಂದಾಗಿದ್ದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಗ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ.


Spread the love

About Laxminews 24x7

Check Also

ಸಾಗರ | ಬ್ರೇಕ್‌ ಫೇಲ್‌ ಆಗಿ ಮನೆ ಮೇಲೆ ಬಿದ್ದ ಪ್ರವಾಸಿ ಬಸ್ – 8 ಮಹಿಳೆಯರಿಗೆ ಗಾಯ

Spread the loveಶಿವಮೊಗ್ಗ: ಪ್ರವಾಸಕ್ಕೆ ಬಂದಿದ್ದ ಬಸ್ ಬ್ರೇಕ್‌ ಫೇಲ್‌ ಆಗಿ ಮನೆಯೊಂದರ ಮೇಲೆ ಬಿದ್ದ ಘಟನೆ ಸಾಗರ  ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ