Breaking News

ರೈತರಿಗೆ 25 ಸಾವಿರ ಪರಿಹಾರ ಕೊಟ್ಟರೆ ಮಾತ್ರ ಸರ್ವಪಕ್ಷ ನಿಯೋಗದಲ್ಲಿ ಭಾಗಿ- ಛಲವಾದಿ

Spread the love

ಬೆಂಗಳೂರು: ರೈತರಿಗೆ  25 ಸಾವಿರ ರೂ. ಪರಿಹಾರ ಕೊಟ್ಟರೆ ಮಾತ್ರ ಸರ್ವಪಕ್ಷ ನಿಯೋಗದಲ್ಲಿ ನಾವು ಹೋಗ್ತೀವಿ ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತಾಡಿದ ಅವರು, ಸರ್ಕಾರ ಶ್ವೇತ ಪತ್ರ ಬಿಡುಗಡೆ ಮಾಡಲು ತಯಾರಿಲ್ಲ.ಸರ್ಕಾರ ಸಮಯ ಕಳೆಯುವ ಕೆಲಸ ಮಾಡುತ್ತಿದೆ ಅಷ್ಟೇ. ಸಿಎಂ ರೈತರಿಗೆ 25 ಸಾವಿರ ರೂ. ಬರ ಪರಿಹಾರ ಕೊಡುತ್ತೇವೆ ಎಂದು ಘೋಷಣೆ ಮಾಡಿ. ಅಂದರೆ ಮಾತ್ರ ನಾವು ನಿಯೋಗದಲ್ಲಿ ಬರುತ್ತೇವೆ ಎಂದಿದ್ದಾರೆ.

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಸರ್ವಾನುಮತದಿಂದ ತೀರ್ಮಾನ ಆಗಿದೆ. ಹಾಗಾಗಿ ನಾವು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಾತ್ರ ನಿಯೋಗದಲ್ಲಿ ಬರುತ್ತೇವೆ. ರೈತರಿಗೆ 25000 ರೂ. ಬರ ಪರಿಹಾರ ಕೊಟ್ಟರೆ ಮಾತ್ರ ನಾವು ಬರುತ್ತೇವೆ. ಇಲ್ಲದಿದ್ದರೆ ಸರ್ಕಾರ ಅವರ ತೀರ್ಮಾನ ಮಾಡಬಹುದು ಅಂತ‌ ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ತಡವಾಗಿ ಹೋಗಿದ್ದೇ ಹಿಂದಿನ ಸಾಲಲ್ಲಿ ಕೂರಲು ಕಾರಣ: ಸಿದ್ದರಾಮಯ್ಯ ಸ್ಪಷ್ಟನೆ

Spread the loveಬೆಂಗಳೂರು: ದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿಯವರ  ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ