ಬೆಂಗಳೂರು: ಫಾರ್ಮ್ 7 ಕೊಟ್ಟು ಹೆಸರು ಡಿಲೀಟ್ ಆಗಿರುವ ಮತದಾರರನ್ನು ಕರೆತಂದು ನಿಲ್ಲಿಸಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿದ ಅವರು, ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಚುನಾವಣಾ ವ್ಯವಸ್ಥೆಯನ್ನು ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಡಿ.ಕೆ ಶಿವಕುಮಾರ್ ಅವರು ರಾಜ್ಯದ ಸಿಎಂ, ಕಾಂಗ್ರೆಸ್ ಅಧ್ಯಕ್ಷರಲ್ಲ.
ಸಂವಿಧಾನ ಎತ್ತಿ ಹಿಡಿಯುತ್ತೇವೆ ಎಂದು ಪ್ರಮಾಣ ಮಾಡಿದವರು ಅವರು. ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿದ್ದಾರೆ. ಕಾನೂನು ಪಾಲಿಸಬೇಕಾದವರು ಕಾನೂನು ಮುರಿದಿದ್ದಾರೆ. ಪ್ರತಿಭಟನೆಗೆ ಫ್ರೀಡಂ ಪಾರ್ಕ್ ಒಂದೇ ಸ್ಥಳ ಅಂತ ಕೋರ್ಟ್ ಹೇಳಿದೆ. ಆದರೆ ಅವರು ಕೋರ್ಟ್ ಆದೇಶ ಧಿಕ್ಕರಿಸಿ ಆಯೋಗದ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ದೆಹಲಿಯ ದೊರೆಗಳು ಯಾವುದಾದ್ರೂ ನಾಟಕ ಆಡು ಅಂತ ಫೋನ್ ಮಾಡಿದ್ರಂತೆ, ಅದಕ್ಕೆ ಡಿಕೆಶಿ ನಾಟಕ ಆಡುತ್ತಿದ್ದಾರೆ. ಫಾರ್ಮ್ 7 ಏನಕ್ಕೆ ಹಾಕ್ತಾರೆ? ವಿದೇಶಿಯರು ಇದ್ರೆ, ಅನರ್ಹರು ಇದ್ರೆ ದೇಶದ ಯಾವುದೇ ಪ್ರಜೆ ಅರ್ಜಿ ಕೊಡಬಹುದು. ಫಾರ್ಮ್ 7ನಲ್ಲಿ ಅರ್ಜಿ ಕೊಟ್ಟಿರೋದು ಒಟ್ಟು 25 ಸಾವಿರ ಮಾತ್ರ. 15 ಲಕ್ಷ ಫಾರ್ಮ್ 7 ಕೊಟ್ಟಿದ್ದಾರೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು. ಫಾರ್ಮ್ 7 ಕೊಟ್ಟು ಹೆಸರು ಡಿಲೀಟ್ ಆಗಿರುವ ಮತದಾರರನ್ನು ಕರೆತಂದು ನಿಲ್ಲಿಸಿ, ತಾಕತ್, ಧಮ್ ಇದ್ರೆ ಜನರ ಮುಂದೆ ಡಿಲೀಟ್ ಆಗಿರೋದನ್ನು ತಂದು ತೋರಿಸಿ.
ನಮ್ಮ ದೇಶದಲ್ಲಿ 10 ಲಕ್ಷ ಅಕ್ರಮ ಬಾಂಗ್ಲಾ ವಾಸಿಗಳಿದ್ದಾರೆ ಎಂದು ಪೊಲೀಸರೇ ಮಾಹಿತಿ ಕೊಟ್ಟಿದ್ದಾರೆ. ಫಾರ್ಮ್ 7 ಕೊಟ್ಟ ಮೇಲೆ ಅದನ್ನು ತೆಗೆಯಲು ಹೇಳೋದಕ್ಕೆ ನೀವ್ಯಾರು? ನಿಮಗೇನು ಅಧಿಕಾರ ಇದೆ? ಚುನಾವಣಾ ಆಯೋಗ ಪರಿಶೀಲನೆ ಮಾಡುತ್ತೆ, ನಿಮಗೆ ಏನು ಸಂಬಂಧ? ಅರ್ಹರ ಹೆಸರು ತೆಗೆದ್ರೆ ಅಂಥವರನ್ನು ಕರೆತಂದು ಆಯೋಗದ ಮುಂದೆ ನಿಲ್ಲಿಸಿ ಎಂದಿದ್ದಾರೆ.
ಬರ ವೈಫಲ್ಯ ಡೈವರ್ಟ್ ಮಾಡಲು ಈ ನಾಟಕ ಮಾಡುತ್ತಿದ್ದಾರೆ. ಬಿಜೆಪಿ ಕಚೇರಿಗಳಲ್ಲಿ ಫಾರ್ಮ್7 ನಲ್ಲಿ ಮಾಹಿತಿ ಪ್ರಿಂಟ್ ಮಾಡಿದ್ರೆ ಪ್ರೂವ್ ಮಾಡಲಿ. ಸಿಎಂ ತಮ್ಮ ಆರೋಪ ಸಾಬೀತು ಮಾಡಲಿ. ಫಾರ್ಮ್ 7ನ್ನು ಬಿಜೆಪಿ ಕಚೇರಿಯಲ್ಲಿ ಪ್ರಿಂಟ್ ಮಾಡಿದ್ರೆ ಸಾಬೀತು ಮಾಡಿ, ಕೇಸ್ ಹಾಕಿ, ಕ್ರಮ ತಗೊಳ್ಳಿ ಎಂದು ಸವಾಲು ಹಾಕಿದ್ದಾರೆ.
Laxmi News 24×7