Breaking News

ಕನ್ನಡ ಶಾಸನಗಳು ಸಾಹಿತ್ಯ ಮತ್ತು ಸಂಸ್ಕೃತಿಯ ತವನಿಧಿ: ಡಾ. ಎಸ್.ಡಿ. ಕೆಂಗಲಗುತ್ತಿ

Spread the love

ಬಾಗಲಕೋಟೆ: ಕನ್ನಡ ನಾಡಿನ ಬಹುತೇಕ ಶಾಸನಗಳ ರಚನೆಗೆ ಧರ್ಮ ಹಾಗೂ ವೀರ ಮೌಲ್ಯಗಳು ಪ್ರೇರಣೆಯಾಗಿವೆ. ಇತಿಹಾಸದ ನಿಖರ ನಿರ್ಮಾಣಕ್ಕೆ ಶಾಸನಗಳು ಪ್ರಮುಖ ಆಧಾರಗಳಾಗಿದ್ದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ತವನಿಧಿಗಳಾಗಿವೆ ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್.ಡಿ. ಕೆಂಗಲಗುತ್ತಿ ಹೇಳಿದರು.

ನಗರದ ಬಿ.ವ್ಹಿ.ವ್ಹಿ.ಎಸ್. ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಮತ್ತು ಇತಿಹಾಸ ವಿಭಾಗಗಳ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಅಪಾರ ಸಂಖ್ಯೆಯಲ್ಲಿ ಶಾಸನಗಳು ದೊರೆಯುತ್ತಿದ್ದು, ಅವುಗಳ ಮೂಲಕ ಅಂದಿನ ಇತಿಹಾಸ, ಧರ್ಮ, ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯ ಕುರಿತು ಮಹತ್ವದ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಶಾಸನಗಳು ನಮ್ಮ ಪರಂಪರೆಗೆ ಹಿಡಿದ ಕೈಗನ್ನಡಿಯಾಗಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜೆ. ಒಡೆಯರ ಮಾತನಾಡಿ, ಕನ್ನಡ ಶಾಸನಗಳ ಮೂಲಕ ಕರ್ನಾಟಕದ ಸಾವಿರಾರು ವರ್ಷಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಶಾಸನಗಳ ಅಧ್ಯಯನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಐ. ನಂದಿಕೋಲಮಠ ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ವಿ.ಆರ್. ಹಿರೇಮಠ ಪರಿಚಯಿಸಿದರು. ಶ್ರೀ ಎ.ವಿ. ಪುರಾಣಿಕ ವಂದಿಸಿದರು. ಶ್ರೀಮತಿ ಎಸ್.ಕೆ. ಹಿರೇಮಠ ನಿರೂಪಿಸಿದರು.


Spread the love

About Laxminews 24x7

Check Also

ಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆ

Spread the loveನವದೆಹಲಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ  ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ