Breaking News

ಚಾಕು ಅಲ್ಲ ಒಮಾನ್‌ ಪೈಲಟ್‌ ಮಚ್ಚರ್‌ಗೆ ಹೊಡೆದಿದ್ದು ಕೊಡಲಿಯಿಂದ!

Spread the love

ಟೆಲ್‌ ಅವೀವ್: ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ  ವಿಮಾನದಲ್ಲಿ ನಡೆದ ಉಗ್ರ ದಾಳಿಯ ವರದಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಕಾಕ್‌ಪಿಟ್‌ನಲ್ಲಿ ಸಹ ಪೈಲಟ್‌ಗೆ ತೀವ್ರ ಗಾಯಗೊಳಿಸಲು ಪೈಲಟ್‌ಗೆ ಚಾಕು ಹೇಗೆ ಸಿಕ್ಕಿತು? ವಿಮಾನ ನಿಲ್ದಾಣದಲ್ಲಿ ಆಯುಧವನ್ನು ತೆಗೆದುಕೊಂಡು ಹೋಗಲು ಅನುಮತಿ ಸಿಕ್ಕಿದ್ದು ಹೇಗೆ ಇತ್ಯಾದಿ ಪ್ರಶ್ನೆಗಳು ಎದ್ದಿತ್ತು. ಆದರೆ ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಸುದ್ದಿ ಪ್ರಕಟವಾದ ಸಂದರ್ಭದಲ್ಲಿ ಒಮನ್‌ ಪೈಲಟರ್‌ ಭಾರತ ಮೂಲದ ಸ್ಮಿತ್‌ ಮಚ್ಚರ್ಮಡಚುವ ಚಾಕುನಿಂದ ಇರಿದಿದ್ದಾನೆ. ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರು ಸ್ಮಿತ್‌ ಮಚ್ಚರ್‌ ಅವರನ್ನು ರಕ್ಷಿಸಿದ್ದರು ಎಂದು ವರದಿಯಾಗಿತ್ತು. ಆದರೆ ಈಗ ಒಮನ್‌ ಪೈಲಟ್‌ ಯಾವುದೇ ಚಾಕು ಅಥವಾ ಹೊರಗಿನ ಆಯುಧವನ್ನು ಕಾಕ್‌ಪಿಟ್‌ಗೆ ಅಕ್ರಮವಾಗಿ ತಂದಿರಲಿಲ್ಲ. ಬದಲಾಗಿ ತುರ್ತು ಸಂದರ್ಭಗಳಿಗಾಗಿ ಕಾಕ್‌ಪಿಟ್‌ನಲ್ಲೇ ಇರಿಸಲಾಗುವ ಕ್ರ್ಯಾಶ್ ಆಕ್ಸ್ (ಬೆಂಕಿ ನಂದಿಸುವ/ತುರ್ತು ಕೊಡಲಿ) ಬಳಸಿ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.

ಕಾಕ್‌ಪಿಟ್‌ನಲ್ಲಿ ಕೊಡಲಿ ಯಾಕೆ ಇರುತ್ತೆ?
ಅಂತರರಾಷ್ಟ್ರೀಯ ವಿಮಾನಯಾನ ನಿಯಮಗಳ ಪ್ರಕಾರ, ಪ್ರತಿಯೊಂದು ವಾಣಿಜ್ಯ ವಿಮಾನದಲ್ಲಿ ‘ಕ್ರ್ಯಾಶ್ ಆಕ್ಸ್’ ಅಳವಡಿಸುವುದು ಕಡ್ಡಾಯ. ವಿಮಾನ ತಯಾರಿಸುವ ಕಂಪನಿಗಳೇ ಈ ಕೊಡಲಿಯನ್ನು ವಿಮಾನದ ಒಳಗಡೆ ಇಡುತ್ತವೆ. ವಿಮಾನ ಅಪಘಾತಕ್ಕೀಡಾದಾಗ ತುರ್ತು ಪರಿಸ್ಥಿತಿಯಲ್ಲಿ ಹೊರಬರಲು ದ

ಹಿಂದೆ ಈ ಕೊಡಲಿಯನ್ನು ವಿಮಾನದ ಮುಖ್ಯ ಕ್ಯಾಬಿನ್‌ನಲ್ಲಿ ಇಡಲಾಗುತ್ತಿತ್ತು. ಆದರೆ, 25 ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕ ದಾಳಿಯ ನಂತರ ಭದ್ರತಾ ದೃಷ್ಟಿಯಿಂದ ಇವುಗಳನ್ನು ನೇರವಾಗಿ ಕಾಕ್‌ಪಿಟ್‌ಗೆ ಸ್ಥಳಾಂತರಿಸಲಾಯಿತು. ಪ್ರಸ್ತುತ ಈ ಆಯುಧವನ್ನು ಪೈಲಟ್‌ಗಳಿಗೆ ಸುಲಭವಾಗಿ ಸಿಗುವಂತೆ ಕಾಕ್‌ಪಿಟ್ ಒಳಗೇ ಇರಿಸಲಾಗುತ್ತದೆ.

ಪತ್ತೆಯಾಗಿಲ್ಲ ಗುರುತು:
ದಾಳಿ ನಡೆಸಿದ ಒಮಾನಿ ಸಹ-ಪೈಲಟ್‌ನ ನಿಖರ ಗುರುತು ಮತ್ತು ಈ ಕೃತ್ಯದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಆದರೆ, ಆತನನ್ನು ಬಂಧಿಸಲಾಗಿದೆ ಎಂದು ನೆತನ್ಯಾಹು ತಿಳಿಸಿದ್ದಾರೆ. ಸೌದಿ ಅರೇಬಿಯಾ ಮತ್ತು ಯುಎಇ (UAE) ಅಧಿಕಾರಿಗಳು ತನಿಖೆ ನಡೆಯುತ್ತಿದೆ ಎಂಬುದನ್ನು ಬಿಟ್ಟು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಇಸ್ರೇಲ್‌ಗೆ ಮತ್ತು ಇಸ್ರೇಲ್‌ನಿಂದ ಕಾರ್ಯಾಚರಿಸುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸುವುದಾಗಿ ಫ್ಲೈದುಬೈ ಘೋಷಿಸಿದೆ.

ಇಸ್ರೇಲ್‌ನಲ್ಲಿ ಭದ್ರತಾ ಬೆದರಿಕೆಯ ಎಚ್ಚರಿಕೆ ಇರುವ ನಡುವೆಯೇ ಈ ಘಟನೆ ನಡೆದಿದೆ. ಗಾಜಾ ಸಂಘರ್ಷಕ್ಕೆ ಕಾರಣವಾದ ಹಮಾಸ್‌ನ ಅಕ್ಟೋಬರ್ 7, 2023ರ ದಾಳಿಗೆ 3 ವರ್ಷ ತುಂಬುತ್ತಿರುವ ಹೊತ್ತಲ್ಲೇ ಈ ಆಘಾತಕಾರಿ ಘಟನೆ ಸಂಭವಿಸಿದೆ.

ಕ್ಯಾಪ್ಟನ್ ಮಚ್ಚರ್ ಹಾಗೂ ಕಾಕ್‌ಪಿಟ್‌ಗೆ ನುಗ್ಗಿದ ಪ್ರಯಾಣಿಕರು ಮತ್ತೊಂದು 9/11 ಮಾದರಿಯ ಭಾರೀ ದುರಂತವನ್ನು ತಪ್ಪಿಸಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ತಿಳಿಸಿದ್ದಾರೆ.


Spread the love

About Laxminews 24x7

Check Also

ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ

Spread the loveಕೊಪ್ಪಳ: ಇಲ್ಲಿನ ಗಂಗಾವತಿ ಬಸ್ ನಿಲ್ದಾಣದಲ್ಲಿ  ಹುಡುಗಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರಿಗೆ ಧರ್ಮದೇಟು ನೀಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ