Breaking News

ಜನರಿಗೆ ಗುಡ್ ನ್ಯೂಸ್: ಸರ್ಕಾರದಿಂದ ಇ-ಕೆವೈಸಿ ಆ್ಯಪ್ ಬಿಡುಗಡೆ

Spread the love

ಬೆಂಗಳೂರು: ಸರ್ಕಾರ ಜನರಿಗೆ ಗುಡ್ ನ್ಯೂಸ್ ನೀಡಿದ್ದು, ಆನ್‌ಲೈನ್ ಫಟಾಫಟ್ ಅಂತ ಇ-ಕೆವೈಸಿ  ಮಾಡಲು ಇದೀಗ ಹೊಸ ಆಪ್ ಬಿಡುಗಡೆ ಮಾಡಿದೆ.

ಈಗಾಗಲೇ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿಗಾಗಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದ್ದು, ಹೀಗಾಗಿ ಇದನ್ನು ತಪ್ಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಆಪ್ ರಿಲೀಸ್ ಮಾಡಿದೆ.

ಈ ಆಪ್‌ಗೆ ಅನ್ನಸೇವೆ ಎಂದು ಹೆಸರಿಡಲಾಗಿದ್ದು, ಎಂಟು ಜಿಲ್ಲೆಗೆ ಮಾತ್ರ ಲಾಂಚ್ ಮಾಡಲಾಗಿದೆ. ಈ ಆಪ್ ಮೂಲಕ ಮನೆಯಲ್ಲಿ ಕೂತು ಇ-ಕೆವೈಸಿ ಮಾಡಬಹುದು. ಸದ್ಯ ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕೊಪ್ಪಳದಲ್ಲಿ ಆಪ್ ಲಾಂಚ್ ಆಗಿದೆ. 20 ದಿನದ ಬಳಿಕ ಅಧಿಕೃತವಾಗಿ 31 ಜಿಲ್ಲೆಗೆ ಸಿಗುವಂತೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ಬಗ್ಗೆ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಇ-ಕೆವೈಸಿ ಅಪ್ಡೇಟ್ ಮಾಡೋಕೆ ಕೇಂದ್ರ ಹೇಳಿತ್ತು. ಆದರೆ ಸರ್ವರ್ ಸಮಸ್ಯೆ ಉದ್ಭವವಾಗಿದೆ. ಈಗ ಸರ್ವರ್ ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇವೆ. ರಾಜ್ಯದಲ್ಲಿ ನಾಲ್ಕುವರೆ ಕೋಟಿ ಫಲಾನುಭವಿಗಳು ಇದ್ದಾರೆ. ಹೀಗಾಗಿ ನಾವು ಸರಿಯಾದ ರೀತಿಯಲ್ಲಿ ಸೇವೆ ಕೊಡಬೇಕು ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ

Spread the loveಕೊಪ್ಪಳ: ಇಲ್ಲಿನ ಗಂಗಾವತಿ ಬಸ್ ನಿಲ್ದಾಣದಲ್ಲಿ  ಹುಡುಗಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರಿಗೆ ಧರ್ಮದೇಟು ನೀಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ