Breaking News

ಇಬ್ಬರನ್ನು ಬಲಿ ಪಡೆದಿದ್ದ ‘ಶೌರ್ಯ’ ಸೆರೆಹಿಡಿದ ಏಳೇ ತಿಂಗಳಲ್ಲಿ ಸಾವು

Spread the love

ಶಿವಮೊಗ್ಗ: ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರನ್ನು ಬಲಿ ಪಡೆದಿದ್ದ ಕಾಡಾನೆ  ಶೌರ್ಯ (32) ಶಿವಮೊಗ್ಗದ  ಸಕ್ರೆಬೈಲು  ಆನೆ ಬಿಡಾರದಲ್ಲಿ ಮೃತಪಟ್ಟಿದೆ.

2026ರ ಫೆಬ್ರವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ನಡೆದ ಕಾಡಾನೆ ದಾಳಿಗಳ ಬಳಿಕ ಶೌರ್ಯ ಆನೆಯನ್ನು ಸೆರೆಹಿಡಿಯಲಾಗಿತ್ತು. ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ ತಂದು ಪಳಗಿಸಲಾಗಿತ್ತು. ಸೆರೆ ಕಾರ್ಯಾಚರಣೆ ಹಾಗೂ ತರಬೇತಿ ವೇಳೆ ಆನೆ ಗಾಯಗೊಂಡಿತ್ತು ಎಂದು ತಿಳಿದು ಬಂದಿದೆ.

ತರಬೇತಿ ವೇಳೆ ಆನೆಯ ಕಾಲು ಹಾಗೂ ದೇಹದ ಬೇರೆ ಬೇರೆ ಭಾಗಗಳಲ್ಲಿ ಗಾಯವಾಗಿತ್ತು. ಸೆರೆ ಹಿಡಿಯುವ ವೇಳೆ ತೊಡೆಯ ಒಳಭಾಗದಲ್ಲಿ ಗಾಯವಾಗಿತ್ತು. ಇದನ್ನು ಗಮನಿಸದ ಪರಿಣಾಮ ಒಳಭಾಗದಲ್ಲಿ ಗಾಯ ತೀವ್ರ ಉಲ್ಬಣಗೊಂಡಿತ್ತು. ಸೆ.30ರ ಸಂಜೆ ಆನೆ ಬಿಡಾರದಲ್ಲಿ ಕುಸಿದು ಬಿದ್ದಿತ್ತು. ಈ ವೇಳೆ ತಕ್ಷಣ ಆನೆಗೆ ಚಿಕಿತ್ಸೆ ನೀಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಇಂದು (ಅ.1) ಬೆಳಗ್ಗೆ ಆನೆ ಸಾವನ್ನಪ್ಪಿದೆ.

ಒಂದೇ ವಾರದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಶೌರ್ಯ
ಬಾಳೆಹೊನ್ನೂರು ಸಮೀಪದ ಹ್ಯಾರಂಬಿಪುರ ಭಾಗದಲ್ಲಿರುವ ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಮೊದಲು ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಇದಾದ ಒಂದೇ ವಾರದಲ್ಲಿ ಅದೇ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ಹೊಸಪೇಟೆ ಮೂಲದ ಬೋರಮ್ಮ (34) ಅವರ ಮೇಲೂ ಕಾಡಾನೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಘಟನೆ ಬಳಿಕ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ದೊಡ್ಡ ಮಟ್ಟದ ಕಾರ್ಯಾಚರಣೆ ಕೈಗೊಂಡಿತ್ತು. 7 ಪಳಗಿದ ಆನೆಗಳ ಜೊತೆಗೆ 75 ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆನೆಯನ್ನು ಸೆರೆ ಹಿಡಿದಿದ್ದರು. ಬಳಿಕ ಅದನ್ನು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆನೆಗೆ ಶೌರ್ಯ ಎಂದು ಹೆಸರಿಟ್ಟು ಮರದ ಕ್ರಾಲ್‌ನಲ್ಲಿ ಇರಿಸಿ ಪಳಗಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಸುಮಾರು 3 ತಿಂಗಳ ಅವಧಿಯಲ್ಲಿ ಮಾವುತರು ಮತ್ತು ಕಾವಾಡಿಗಳು ಶೌರ್ಯನನ್ನು ಪಳಗಿಸಿದ್ದರು


Spread the love

About Laxminews 24x7

Check Also

ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ

Spread the loveಕೊಪ್ಪಳ: ಇಲ್ಲಿನ ಗಂಗಾವತಿ ಬಸ್ ನಿಲ್ದಾಣದಲ್ಲಿ  ಹುಡುಗಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರಿಗೆ ಧರ್ಮದೇಟು ನೀಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ